ಸಿಎಂ ಸಿದ್ದುಗೆ ಸಾಥ್ ನೀಡಿದ ದಲಿತ ಮುಖಂಡರು

ಬುಧವಾರ, 4 ಮಾರ್ಚ್ 2015 (16:52 IST)
ಸಿಎಂ ಸಿದ್ದರಾಮಯ್ಯನವರು ಇಂದು ಕೈಗೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವಾರು ದಲಿತ ಮುಖಂಡರು ಭಾಗಿಯಾಗಿದ್ದು, ರಾಜಕೀಯಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ. ಹೆದರಬೇಡಿ ಎಂದು ಸಾಥ್ ನೀಡಿದ್ದಾರೆ?!

ಮೂಲಗಳ ಪ್ರಕಾರ 50ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿ ಮುಖ್ಂಡರು, ತಾವು ಅಭವೃದ್ಧಿಗೆ ಪೂರಕವಾದ ಹಲವು ಯೋಜನೆಗಳನ್ನು  ಜಾರಿಗೆ ತಂದಿದ್ದೀರಿ. ಹಾಗೆಯೇ ಮುಂದಿನ ಬಜೆಟ್ ನಲ್ಲಿಯೂ ಕೂಡ ಬಡವರ, ರೈತರ ಪರವಾದ ನೂತನ ಯೋಜನೆಗಳನ್ನು ಜಾರಿಗೊಳಿಸಿ. ನಿಮಗೆ ಯಾವುದೇ ತೊಂದರೆಗಳನ್ನು ನಾವು ನೀಡುವುದಿಲ್ಲ. ಕೇವಲ ಕೆಲ ಮುಖಂಡರು ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಬಗ್ಗೆ ತಕಾರವೆತ್ತುತ್ತಿದ್ದಾರೆ. ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. 
 
ಇನ್ನು ಸಭೆಯ ಬಳಿಕ ಮಾತನಾಡಿದ್ದ ದಲಿತ ಕವಿ ಸಿದ್ದಲಿಂಗಯ್ಯ, ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಿದ್ದಾರೆ. ಅಲ್ಲದೆ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಅಷ್ಟೇಅಲ್ಲದೆ ಬಡವರ, ಬಲ್ಲಿದರಿಗೆ ದನಿಗೂಡಿಸುತ್ತಾ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ ಮತ್ತೇನು ಬೇಕು ಎಂದು ಪ್ರಶ್ನಿಸಿದ ಅವರು, ಸಣ್ಣ ಪುಟ್ಟ ವಾಮನಸ್ಸಿದ್ದಲ್ಲಿ ಬಗೆಹರಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನವನ್ನು ನೀಡಬೇಕು ಎಂಬ ವಿಷಯ ಅಪ್ರಸ್ತುತ ಹಾಗೂ ಅಕಾಲಿಕ ಎಂದಿದ್ದರು. 
 
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 

ವೆಬ್ದುನಿಯಾವನ್ನು ಓದಿ