ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ

ಗುರುವಾರ, 28 ಜನವರಿ 2016 (18:24 IST)
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಗುರುವಾರ ಸ್ಮಾರ್ಟ್ ಸಿಟಿ ಯೋಜನೆಯಡಿ 20 ನಗರಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕಪ್ರಸ್ತಾವನೆ ಸಲ್ಲಿಸಿದ 6 ನಗರಗಳ ಪೈಕಿ ದಾವಣಗೆರೆ ಮತ್ತು ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕರಾವಳಿ ಪ್ರದೇಶ ಮಂಗಳೂರು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 
20 ನಗರಗಳ ಪೈಕಿ ಅಂಗ್ರ ಸ್ಕೋರ್ ಮಾಡಿದ ನಗರಗಳು ಭುವನೇಶ್ವರ್, ಪುಣೆ ಮತ್ತು ಜೈಪುರ.

 ಪಟ್ಟಿಯಲ್ಲಿರುವ ಇತರೆ ನಗರಗಳು ಸೂರತ್, ಕೊಚ್ಚಿ, ಅಹ್ಮದಾಬಾದ್, ಜಬಲ್‌ಪುರ, ವಿಶಾಖಪಟ್ನಂ, ಶೋಲಾಪುರ, ದಾವಣಗೆರೆ, ಇಂದೋರ್, ಎನ್‌ಡಿಎಂಸಿ, ಕೊಯಮತ್ತೂರು, ಕಾಕಿನಾಡ, ಬೆಳಗಾವಿ, ಉದಯಪುರ, ಗುವಾಹಟಿ, ಚೆನ್ನೈ, ಲೂಧಿಯಾನ ಮತ್ತು ಭೂಪಾಲ್. 
 
ಸ್ಮಾರ್ಟ್ ಸಿಟಿ ಅಭಿವೃದ್ದಿಗೆ 3 ಲಕ್ಷ ಕೋಟಿಯನ್ನು ಮೀಸಲಿಡಲಾಗಿದ್ದು, ಟ್ರಾಕ್ ರೆಕಾರ್ಡ್, ಮೂಲಸೌಲಭ್ಯ ಮತ್ತು ಸೇವಾ ಮಟ್ಟವು ಆಯ್ಕೆಗೆ ಮಾನದಂಡವಾಗಿದೆ. ಮುಂದಿನ ವರ್ಷ ಮತ್ತಷ್ಟು 40 ನಗರಗಳನ್ನು ಆಯ್ಕೆಮಾಡಲಾಗಿದ್ದು, ಮೂರನೇ ಹಂತದಲ್ಲಿ 40 ನಗರಗಳನ್ನು ಆಯ್ಕೆ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ