ದೇವೇಗೌಡರ ಹಿರಿಯ ಸೊಸೆ ರಾಜಕೀಯಕ್ಕೆ ಎಂಟ್ರಿ

ಬುಧವಾರ, 3 ಫೆಬ್ರವರಿ 2016 (18:37 IST)
ಮಾಜಿ  ಸಚಿವ ಎಚ್.ಡಿ.ರೇವಣ್ಣ ಪತ್ನಿ ಮತ್ತು ದೇವೇಗೌಡರ ಹಿರಿಯ ಸೊಸೆ  ಭವಾನಿ ರೇವಣ್ಣ ಕೊನೆಗೂ ಜಿಲ್ಲಾ ಪಂಚಾಯತ್ ಚುನಾವಣೆ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೊಳೆನರಸೀಪುರದ ಹಳೇಕೋಟೆ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಸ್ಪರ್ಧಿಸಿದ್ದಾರೆ.

ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ದೇವೇಗೌಡರ ಕಿರಿಯ ಸೊಸೆ ಕುಮಾರ ಸ್ವಾಮಿಯ ಪತ್ನಿ ಅನಿತಾ ಕುಮಾರಸ್ವಾಮಿ ಈಗಾಗಲೇ ರಾಜಕೀಯ ಪ್ರವೇಶ ಮಾಡಿ ಚುನಾವಣೆಗೆ ಸ್ಪರ್ಧಿಸಿದ್ದರು.

ಆದರೆ ರೇವಣ್ಣ ಅವರ ಪತ್ನಿ  ಕೂಡ ಚುನಾವಣೆಗೆ ನಿಲ್ಲಬೇಕೆಂದು ರೇವಣ್ಣ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಒತ್ತಡ ಹಾಕಿದ್ದನ್ನು ಭವಾನಿ ರೇವಣ್ಣ ದೇವೇಗೌಡರಿಗೆ ಮನದಟ್ಟು ಮಾಡಿದ ಮೇಲೆ ಹಳೇಕೋಟೆ ಕ್ಷೇತ್ರದಿಂದ ಜಿ.ಪಂ. ಚುನಾವಣೆಗೆ ನಿಲ್ಲಲು ದೇವೇಗೌಡರು ಅವಕಾಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ