ದೇವೇಗೌಡರ ಸೊಸೆ ಭವಾನಿ ರೇವಣ್ಣಗೆ ಗೆಲುವು

ಮಂಗಳವಾರ, 23 ಫೆಬ್ರವರಿ 2016 (16:50 IST)
ಕುತೂಹಲ ಕೆರಳಿಸಿದ್ದ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೊಸೆ, ರೇವಣ್ಣ ಪತ್ನಿ ಭವಾನಿ  ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಗೌಡರ ಕುಟುಂಬದ ಮತ್ತೊಬ್ಬ ಸೊಸೆ ರಾಜಕೀಯಕ್ಕೆ ಅಧಿಕೃತವಾಗಿ ಕಾಲಿಟ್ಟಂತಾಗಿದೆ.
 
ದೇವೇಗೌಡರ ಕುಟುಂಬದ ಸೊಸೆಯಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಚುನಾವಣೆ ನಿಲ್ಲುವ ಮೂಲಕ ಭವಾನಿ ಹಾಸನ ಜಿಲ್ಲಾ ರಾಜಕೀಯ ವಲಯಗಳಲ್ಲಿ ಅಚ್ಚರಿಗೂ ಕಾರಣರಾಗಿದ್ದರು.
 
ಪಕ್ಷದ ಭದ್ರಕೋಟೆಯಾಗಿರುವ ಮಂಡ್ಯ, ಹಾಸನ , ತುಮಕೂರು ಜಿಲ್ಲೆಗಳ ಯಾವುದಾದರೊಂದು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವಷ್ಟು ಶಕ್ತಿ ಭವಾನಿ ರೇವಣ್ಣ ಅವರಿಗಿದ್ದರೂ ಹಳೇಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಕುತೂಹಲಕ್ಕೆ ಎಡೆ ಮಾಡಿತ್ತು. ಈಗ ಅವರ ನಿರ್ಧಾರ ಸಮರ್ಪಕವೆಂದು ಸಾಬೀತಾಗಿದೆ. 
 
ಭವಾನಿ ರೇವಣ್ಣ ಅವರು ತಮ್ಮ ಪ್ರತಿಸ್ಪರ್ಧಿಯಿಂದ 4,000 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ