ಡೈರಿಯಲ್ಲಿ ಸ್ಫೋಟಕ ವಿವರ ಬಹಿರಂಗ

ಗುರುವಾರ, 23 ಫೆಬ್ರವರಿ 2017 (20:12 IST)
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಹದ್ಯೋಗಿ ಸಚಿವರು ಕಾಂಗ್ರೆಸ್ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂ ದೇಣಿಗೆ ನೀಡಿದ್ದಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಗಳ ಕುರಿತು ಇರುವ ಡೈರಿ ವಿವರ ಬಹಿರಂಗವಾಗಿದೆ ಎಂದು ಖಾಸಗಿ ಚಾನೆಲ್‌ಗಳು ವರದಿ ಮಾಡಿವೆ. 


ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರಿಗೆ ಸೇರಿದ್ದೆನ್ನಲಾದ ಡೈರಿಯಲ್ಲಿನ ವಿವರಗಳು ಬಯಲಾಗಿವೆ. 
 
ಡೈರಿಯಲ್ಲಿ ಹಣ ಸಂದಾಯವಾದವರ ಹೆಸರುಗಳು ಇನ್ಷಿಯಲ್`ಗಳಲ್ಲಿದೆ. ಕೋಟಿ ಕೋಟಿ ರೂಪಾಯಿಗಳನ್ನ ಇನ್ಷಿಯಲ್`ಗಳ ಮುಂದೆ ಉಲ್ಲೇಖಿಲಾಗಿದ್ದು, ಸ್ಟೀಲ್ ಫ್ಲೈಓವರ್`ನ ಬಗ್ಗೆಯೂ 65 ಕೋಟಿ ರೂಪಾಯಿ ಉಲ್ಲೇಖವಿದೆ ಎನ್ನಲಾಗಿದೆ. ಖಾಸಗಿ ಚಾನಲ್`ಗಳು ವರದಿ ಮಾಡಿರುವ ಪ್ರಕಾರ ಡೈರಿಯ ವಿವರ ಇಂತಿದೆ.
 
ಡೈರಿಯಲ್ಲಿನ ವಿವರಗಳು:
 
ಇತರರಿಗೆ ಕೊಟ್ಟಿದ್ದು:
 
ಎಸ್'​ಜಿ ಆಫೀಸ್ - 4  ಕೋಟಿ
ಆರ್'​ಜಿ ಆಫೀಸ್ - 8 ಕೋಟಿ
ಎಪಿ - 3 ಕೋಟಿ
ಸ್ಟೀಲ್ ಫ್ಲೈ ಓವರ್​ - 65 ಕೋಟಿ
ಹಣ ಪಡೆದದ್ದು
ಕೆಜೆಜಿ + ಎಂಬಿಪಿ: 32 ಕೋಟಿ
ಹೆಚ್​ಸಿಎಂ: 10  ಕೋಟಿ
ಡಿಕೆಎಸ್​:  3 ಕೋಟಿ
ಆರ್​.ಎಲ್​.ಆರ್.: 5 ಕೋಟಿ
ಆರ್​ವಿಡಿ: 3 ಕೋಟಿ
ಎಸ್​'ಬಿ: 4 ಕೋಟಿ
ಕೆಇಎಂಪಿ: 3 ಕೋಟಿ
 
ಎಂ. ವೋರಾಗೆ ಕೊಟ್ಟದ್ದು..
ಸೆಪ್ಟಂಬರ್​ - 15 ಕೋಟಿ
ಅಕ್ಟೋಬರ್​  - 10 ಕೋಟಿ
ಅಕ್ಟೋಬರ್​  - 25 ಕೋಟಿ
ಅಕ್ಟೋಬರ್​  - 5 ಕೋಟಿ
ಅಕ್ಟೋಬರ್​ - 6 ಕೋಟಿ
ನವೆಂಬರ್​ - 15 ಕೋಟಿ
ಡಿಸೆಂಬರ್​ - 15 ಕೋಟಿ
ಜನವರಿ - 15 ಕೋಟಿ
ಜನವರಿ - 50 ಕೋಟಿ
ಜನವರಿ - 3 ಕೋಟಿ
ಜನವರಿ - 2 ಕೋಟಿ
 
ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ ಎನ್ನುವ ಯಡಿಯೂರಪ್ಪ ಆರೋಪವನ್ನು ತಿರಸ್ಕರಿಸಿರುವ ಕಾಂಗ್ರೆಸ್ ನಾಯಕರು ಯಾವುದೇ ರೀತಿಯ ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ.
 
ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ, ಡೈರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೇವಲ ರಾಜಕೀಯಕ್ಕಾಗಿ ಡೈರಿಯ ವಿಷಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ