ಸಚಿವರಿಗೆ ಕೊಕ್: ಪರಮೇಶ್ವರ್ ಅಜೆಂಡಾಗೆ ದಿಗ್ವಿಜಯ್ ಸಿಂಗ್ ಎಳ್ಳು ನೀರು

ಭಾನುವಾರ, 26 ಫೆಬ್ರವರಿ 2017 (12:14 IST)
ಸಚಿವರಾಗಿ ನಾಲ್ಕು ವರ್ಷಗಳ ಕಾಲ ಪೂರೈಸಿದವರಿಗೆ ಕೊಕ್ ನೀಡಲಾಗುವುದು ಎನ್ನುವ ವರದಿಗಳನ್ನು ರಾಜ್ಯ ಉಸ್ತುವಾರಿ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ತಳ್ಳಿಹಾಕಿದ್ದಾರೆ.
 
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೀಗ ಉಪ ಚುನಾವಣೆಗಳು ನಡೆಯಲಿವೆ ಇಂತಹ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವುದು ಸರಿಯಲ್ಲ ಎಂದು ತಿಳಿಸಿಗದ್ದಾರೆ.
 
ಹಿರಿಯ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅಜೆಂಡಾಗೆ ದಿಗ್ವಿಜಯ್ ಸಿಂಗ್ ಎಳ್ಳು ನೀರು ಬಿಟ್ಟಿದ್ದಾರೆ.
 
ಕೆಪೆಸಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಕೊಕ್ ನೀಡುವ ಕುರಿತಂತೆ ಗರಂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ