ಸರ್ಕಾರಿ ಶಾಲೆಗಳಲ್ಲಿ ಮಾರ್ಗಸೂಚಿ ಅನುಷ್ಠಾನವಾಗಿಲ್ಲ: ಕೋರ್ಟ್ ಅಸಮಾಧಾನ

ಮಂಗಳವಾರ, 16 ಸೆಪ್ಟಂಬರ್ 2014 (18:17 IST)
ಶೇ.10ರಷ್ಟು ಖಾಸಗಿ ಶಾಲೆಗಳಲ್ಲಿ ಮಾತ್ರ ಮಾರ್ಗಸೂಚಿ ಅನುಷ್ಠಾನ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 589 ಸರ್ಕಾರಿ ಶಾಲೆಗಳ ಪೈಕಿ 4 ಶಾಲೆಗಳಲ್ಲಿ ಮಾತ್ರ ಅನುಷ್ಠಾನ ಮಾಡಲಾಗಿದೆ. ಮಾರ್ಗಸೂಚಿ ಅನುಷ್ಠಾನ ಮಾಡದಿರುವ ಶಾಲೆಗಳ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಗಿದೆ.


ಆಗಸ್ಟ್ 31ರೊಳಗೆ ಮಾರ್ಗಸೂಚಿ ಪಾಲನೆಯಾಗಬೇಕಿತ್ತು. ಆದರೆ ಸರ್ಕಾರಿ ಶಾಲೆಗಳಲ್ಲೇ ಮಾರ್ಗಸೂಚಿ ಅನುಷ್ಠಾನ ಮಾಡದಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮಾರ್ಗಸೂಚಿ ಅನುಷ್ಠಾನಕ್ಕೆ ಸಂಬಂಧಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಖುಸ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮಾರ್ಗಸೂಚಿ ಅನುಷ್ಠಾನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. 

ವೆಬ್ದುನಿಯಾವನ್ನು ಓದಿ