ಆರ್ಕಿಡ್ಸ್ ಶಾಲೆಯ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಧಾರ

ಗುರುವಾರ, 23 ಅಕ್ಟೋಬರ್ 2014 (11:07 IST)
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಆರ್ಕಿಡ್ಸ್ ಶಾಲೆಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಆಯುಕ್ತ ಮಹಮ್ಮದ್ ಮೊಹಸೀನ್ ಭೇಟಿ ನೀಡಿದ್ದಾರೆ. ಈ ಶಾಲೆಯಲ್ಲಿ ಹಲವು ಅಕ್ರಮಗಳು ನಡೆದಿರುವ ಬಗ್ಗೆ ಕೂಡ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. 5ನೇ ತರಗತಿವರೆಗೆ ಮಾತ್ರ ಪರವಾನಿಗೆ ಪಡೆದು ಏಳನೇ ತರಗತಿವರೆಗೆ  ನಡೆಸುತ್ತಿದ್ದಾರೆ.

ನಿಯಮಬಾಹಿರವಾಗಿ ನರ್ಸರಿ ಶಾಲೆಯನ್ನು ನಡೆಸುತ್ತಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ತರಗತಿಗಳನ್ನು ನಡೆಸುತ್ತಿದ್ದಾರೆಂದು ಆರೋಪಿಸಲಾಗಿದೆ.

ಏತನ್ಮಧ್ಯೆ ಶಾಲಾ ಅಟೆಂಡರ್ ಗುಂಡಣ್ಣ ಎಂಬವನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರಿಗೆ ಗುಂಡಣ್ಣನ ಮೇಲೆ ಶಂಕೆ ಮೂಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ 9 ಜನ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ 6 ಜನ ಪುರುಷರು ಕೆಲಸ ಮಾಡಿದ್ದರು. ಬಾಲಕಿ ಮನೆಗೆ ಹಿಂತಿರುಗಿದಾಗ ಅಳುತ್ತಿದ್ದಳು. ಆಗ ಪೋಷಕರು ವಿಚಾರಿಸಿದಾಗ ಅಂಕಲ್ ಹೊಡೆದಳು ಎಂದು ಹೇಳಿದ್ದಳು.

ನಂತರ ಪೊಲೀಸರು ಮೂವರು ಸಿಬ್ಬಂದಿಯ ಫೋಟೋಗಳನ್ನು ತೋರಿಸಿ ಯಾರು ಹೊಡೆದಿದ್ದೆಂದು ಕೇಳಿದಾಗ ಗುಂಡಣ್ಣನ ಫೋಟೋವನ್ನು ಬಾಲಕಿ ತೋರಿಸಿದ್ದಳು. ಈ ಹಿನ್ನೆಲೆಯಲ್ಲಿ ಗುಂಡಣ್ಣನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ