ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಎಸ್‌ಪಿಪಿ ನೇಮಕ ಅಸಿಂಧು ಎಂದ ಸುಪ್ರೀಂ

ಸೋಮವಾರ, 27 ಏಪ್ರಿಲ್ 2015 (13:56 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ವಿರುದ್ಧ ಇರುವ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪ್ರಕರಣ ಸಂಬಂಧ ನೇಮಿಸಿರುವ ಎಸ್‌ಪಿಪಿ(Special public procecutor) ಅವರ ನೇಮಕ ಅಸಿಂಧು ಎಂದಿದೆ. 
 
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ ಈ ಆದೇಶವನ್ನು ಹೊರಡಿಸಿದ್ದು, ಪ್ರಕರಣವು ಕರ್ನಾಟಕ ಸರ್ಕಾರ ಹಾಗೂ ಹೈಕೋರ್ಟ್‌ಗೆ ಸಂಬಂಧಿಸಿದ್ದಾಗಿದ್ದು, ತಮಿಳುನಾಡಿಗೆ ಸಂಬಂಧವಿಲ್ಲ. ಆದರೆ ತಮಿಳುನಾಡು ಸರ್ಕಾರವೇ ಎಸ್‌ಪಿಪಿ ಅವರನ್ನು ನೇಮಿಸಿದೆ. ಆದ್ದರಿಂದ ಭವಾನಿ ಸಿಂಗ್ ಅವರ ನೇಮಕ ಅಸಿಂಧು ಎಂದಿತು. 
 
ಇದೇ ವೇಳೆ, ಪ್ರಕರಣ ಸಂಬಂಧ ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ ಪ್ರಕರಣದ ತೀರ್ಪನ್ನು ಪ್ರಕಟಿಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.   
ತಮಿಳುನಾಡು ಸರ್ಕಾರವು ಪ್ರಕರಣದ ವಿಚಾರಣೆಯ ಎಸ್‌ಪಿಪಿ ಸ್ಥಾನಕ್ಕೆ ಹಿರಿಯ ವಕೀಲ ಭವಾನಿ ಸಿಂಗ್ ಎಂಬುವವರನ್ನು ನೇಮಿಸಿತ್ತು. ಇದನ್ನು ಪ್ರಶ್ನಿಸಿ ಡಿಎಂಕೆ ಪಕ್ಷದ ನಾಯಕ ಅನ್ಬಳಗನ್ ಅವರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಭಾಗೀಯ ಪೀಠದಲ್ಲಿ ದ್ವಿ ಸದಸ್ಯರಿದ್ದ ನ್ಯಾಯಾಧೀಶರು ಪ್ರತ್ಯೇಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಎಸ್‌ಪಿಪಿ ಬದಲಾವಣೆಯ ವಿಷಯವನ್ನು ಕೈ ಬಿಡಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅನ್ಬಳಗನ್ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶವನ್ನು ಹೊರಹಾಕಿದೆ. ಪ್ರಸ್ತುತ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಮೂರ್ತಿ ಕುಮಾರಸ್ವಾಮಿ ಅವರು ನಡೆಯುತ್ತಿದ್ದಾರೆ. 
 
ಪ್ರಕರಣದ ಪ್ರಮುಖ ಆರೋಪಿ ಜಯಲಲಿತಾ ಅವರು ಸಿಂಗ್ ನೇಮಕವನ್ನು ಬೆಂಬಲಿಸಿದ್ದರು. ಆದರೆ ಕೋರ್ಟ್‌ನ ಈ ಆದೇಶದಿಂದ ಮುಖಭಂಗ ಅನುಭವಿಸುವಂತಾಗಿದೆ. 
 
ಸಿಂಗ್ ತಮಿಳುನಾಡಿನವರಾಗಿದ್ದು, ಆರೋಪಿಗಳೂ ಕೂಡ ತಮಿಳುನಾಡಿನ ಪ್ರಭಾವಿಗಳೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಱಣ ಎಸ್‌ಪಿಪಿ ಅವರನ್ನು ಬದಲಿಸಬೇಕು ಎಂಬುದು ಅನ್ಬಳಗನ್ ಅವರ ಅಭಿಪ್ರಾಯ. 

ವೆಬ್ದುನಿಯಾವನ್ನು ಓದಿ