ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಅಪಾರ್ಟ್‌ಮೆಂಟ್‌ಗೆ ವೈದ್ಯರ ಭೇಟಿ, ಪರಿಶೀಲನೆ

ಮಂಗಳವಾರ, 4 ಆಗಸ್ಟ್ 2015 (12:18 IST)
ಐಎಎಸ್ ಅಧಿಕಾರಿ ಡಿ.ಕೆ. ರವಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಏಮ್ಸ್‌ನ ವೈದ್ಯ ಸುಧೀರ್ ಗುಪ್ತಾ ನೇತೃತ್ವದ ಐವರು ವೈದ್ಯರ ತಂಡ ರವಿ ಸಾವಿಗೀಡಾದ ನಗರದ ಕೋರಮಂಗಲದಲ್ಲಿನ ಸೆಂಟ್ ಜಾನ್‌ವುಡ್ ಅಪಾರ್ಟ್‌ಮೆಂಟ್‌ಗೆ ನಿನ್ನೆ ಭೇಟಿ ನೀಡಿ ಕೊಠಡಿ ಪರಿಶೀಲನೆ ನಡೆಸಿದೆ.  
 
ವೈದ್ಯರ ತಂಡವು ರವಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಘಟನೆ ನಡೆದ ದಿನ ಮಡಿವಾಳ ಪೊಲೀಸರು ಚಿತ್ರೀಕರಿಸಿದ್ದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಅಪಾರ್ಟ್‌ಮೆಂಟ್‌ ಕೊಠಡಿಯಲ್ಲಿನ ಫ್ಯಾನ್ ಮತ್ತು ಚೇರ್‌ನ ಎತ್ತರದ ಬಗ್ಗೆ ಪರಿಶೀಲಸಿದರು. ಜೊತೆಗೆ ರವಿ ಅವರ ಕತ್ತಿನಲ್ಲಿದ್ದ ಬಟ್ಟೆಯನ್ನೂ ಕೂಡ ವೈದ್ಯರು ಪರಿಶೀಲಿಸಿದರು ಎನ್ನಲಾಗಿದ್ದು, ಬಳಿಕ, ಬಳಿಕ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತೆರಳಿತು ಎಂದು ತಿಳಿದು ಬಂದಿದೆ. ನಾಳೆ ಏಮ್ಸ್ ವೈದ್ಯರ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 
 
ಡಿ.ಕೆ.ರವಿ ಅವರು ತಮ್ಮ ಉತ್ತಮ ಆಡಳಿತ ಶೈಲಿಯ ಮೂಲಕ ಜನತೆಯ ನೆಚ್ಚಿನ ನಾಯಕರಾಗಿದ್ದ ಡಿ.ಕೆ.ರವಿ. ಕಳೆದ ಮೇ 16ರಂದು ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣುಬಿಗಿದ ಸ್ಥಿಯಲ್ಲಿ ಪತ್ತೆಯಾಗುವ ಮೂಲಕ ನಿಗೂಢವಾಗಿ ಸಾವನ್ನಪ್ಪಿದ್ದರು. ಆದರೆ ಈ ಪ್ರಕರಣ ಆಥ್ಮಹತ್ಯೆಯಲ್ಲ, ಕೊಲೆ. ಹಾಗಾಗಿ ಪ್ರಕಱಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಇನ್ನು ಸಿಬಿಐ ಅಧಿಕಾರಿಗಳ ಸೂಚನೆ ಮೇರೆಗೆ ವೈದ್ಯರು ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ.  

ವೆಬ್ದುನಿಯಾವನ್ನು ಓದಿ