ಡಿಕೆಶಿ ಸಿಎಂ ಆಗುವ ಹಗಲುಕನಸು ಕಾಣ್ತಿದ್ದಾರೆ: ಹಿರೇಮಠ್ ವಾಗ್ದಾಳಿ

ಶುಕ್ರವಾರ, 24 ಅಕ್ಟೋಬರ್ 2014 (14:43 IST)
ಸಚಿವ ಡಿ.ಕೆ.ಶಿವಕುಮಾರ್ ಸಿಎಂ ಆದರೂ ಅಚ್ಚರಿಯಿಲ್ಲ ಎಂದು ಹಿರೇಮಠ್ ಹೇಳಿದ್ದಾರೆ. ಡಿಕಶಿ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಇಬ್ಬರು ಮಂತ್ರಿಗಳ ಕುಟುಂಬ ಭ್ರಷ್ಟ ಕುಟುಂಬ. ಡಿಕೆಶಿ ಕುಟುಂಬವೂ ಭ್ರಷ್ಟ ಕುಟುಂಬ.

ದಿನೇಶ್ ಗುಂಡೂರಾವ್ ಕುಟುಂಬವೂ ಭ್ರಷ್ಟ ಕುಟುಂಬ ಎಂದು ಎಂದು ಸಮಾಜಪರಿವರ್ತನಾ ಸಂಘದ ಮುಖಂಡ ಹಿರೇಮಠ್ ಚಾಮರಾಜನಗರದಲ್ಲಿ ವಾಗ್ದಾಳಿ ಮಾಡಿದರು. ಗುಂಡೂರಾವ್ ಅವರದ್ದು ನಂ. 1 ಭೂಗಳ್ಳರ ಕುಟುಂಬ. ಕಾಂಗ್ರೆಸ್ ಸೋಲಿಗೇ ಇಂಥ ಭ್ರಷ್ಟರು  ಇರುವುದೇ ಕಾರಣವಾಗಿದೆ. ಇವರ ವಿರುದ್ಧ ಕೋರ್ಟ್ ಮೆಟ್ಟಿಲು ಏರುತ್ತೇನೆ ಎಂದು ಹಿರೇಮಠ್ ಹೇಳಿದರು.

 ಡಿ.ಕೆ.ಶಿವಕುಮಾರ್  ಅಕ್ರಮಗಳನ್ನು ನಡೆಸಿರುವ ಅನೇಕ ಆರೋಪಗಳನ್ನು ಹಿರೇಮಠ್ ಮಾಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ವಿರುದ್ದ ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ  ದಿಗ್ವಿಜಯ್ ಸಿಂಗ್ ವರದಿ ಕೇಳಿದ್ದರು.. ದಿನೇಶ್ ಗುಂಡೂರಾವ್ ಹಣಕಾಸು ನಿಗಮಕ್ಕೆ ತಪ್ಪು ಮಾಹಿತಿ ನೀಡಿ 9 ಕೋಟಿ ರೂ. ಸಾಲ ತೆಗೆದುಕೊಂಡು ಕರ್ನಾಟಕ ಹಣಕಾಸು ಸಂಸ್ಥೆಗೆ ನಷ್ಟ ಉಂಟುಮಾಡಿದ್ದಾರೆ.
 
ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿದ ಆರೋಪ ಗುಂಡೂರಾವ್ ಅವರ ವಿರುದ್ಧ ಇದೆ. ಸಮಾಜಪರಿವರ್ತನಾ ಮುಖಂಡ ಹಿರೇಮಠ್ ಎಐಸಿಸಿಗೆ ದಾಖಲೆಗಳನ್ನು ಸಲ್ಲಿಸಿದ್ದರು. ಸುಮಾರು 1300 ಎಕರೆ ಗೋಮಾಳ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಎ.ಟಿ. ರಾಮಸ್ವಾಮಿ ವರದಿಯಲ್ಲಿ ಆರೋಪಿಸಲಾಗಿತ್ತು.
 
ಹಿರೇಮಠ್ ಅವರು ಸೋನಿಯಾಗಾಂಧಿ ಮತ್ತು ಏಐಸಿಸಿಗೆ ಇವುಗಳನ್ನು ಸಮರ್ಥಿಸುವ ಎಲ್ಲಾ ದಾಖಲೆಗಳನ್ನು ಕಳಿಸಿದ್ದರಿಂದ ದಿಗ್ವಿಜಯ್ ಸಿಂಗ್  ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ