ತೇಜೋವಧೆ: ಕೋರ್ಟ್ ಮೊರೆ ಹೋಗಲು ಡಿಕೆಶಿ ನಿರ್ಧಾರ

ಮಂಗಳವಾರ, 25 ನವೆಂಬರ್ 2014 (16:05 IST)
ಟಿವಿ 9 ಕೇಬಲ್ ಪ್ರಸಾರ ಸ್ಥಗಿತವಾಗುವುದಕ್ಕೆ ನಾನಾಗಲಿ, ಸರ್ಕಾರವಾಗಲೀ ಕಾರಣವಲ್ಲ. ಪ್ರಸಾರ ಸ್ಥಗಿತಗೊಳಿಸುವಂತೆ ನಾವು ಯಾರಿಗೂ ಆದೇಶಿಸಿಲ್ಲ.  ಪ್ರಜಾಸತ್ಮಾತ್ಮಕ ಮೌಲ್ಯಗಳಲ್ಲಿ ನಾವು ನಂಬಿಕೆಯಿಟ್ಟವರು. ವೈಯಕ್ತಿಕ ಕಾರಣಗಳಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ.

ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಸರ್ಕಾರದ ವಿರುದ್ಧ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಟಿವಿ9 ಪ್ರಸಾರ ಮಾಡದಂತೆ  ಕೇಬಲ್ ಆಪರೇಟರ್‌ಗಳಿಗೆ ಕರ್ನಾಟಕ ಸರ್ಕಾರ ಸೂಚನೆ ನೀಡಿದ್ದು, ಬೆಂಗಳೂರು ಸೇರಿದಂತೆ  ರಾಜ್ಯದ ಹಲವೆಡೆ ನಿನ್ನೆ ಸಂಜೆಯಿಂದಲೇ ಟಿವಿ9 ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ.
 
3 ದಿನಗಳ ಹಿಂದೆ ರಾಜ್ಯ ಕೇಬಲ್ ಆಪರೇಟರ್ ಪದಾಧಿಕಾರಿಗಳ ಸಭೆ ಕರೆದಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಟಿವಿ9 ಪ್ರಸಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರು.

ಇಲ್ಲವಾದಲ್ಲಿ ವಿದ್ಯುತ್ ಕಂಬಗಳ ಮೂಲಕ ಕೇಬಲ್‌ಗಳು ಹಾದುಹೋಗಿರುವುದರಿಂದ ಹೆಚ್ಚಿನ ಶುಲ್ಕ ಭರಿಸಲು ಸಿದ್ಧರಾಗಿ ಎಂಬ ಧಮ್ಕಿ ಕೂಡಹಾ ಕಿದ್ದರು. . ಹಾಗಾಗಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನಲ್ಲಿ ಟಿವಿ9 ಪ್ರಸಾರವನ್ನು ನಿಲ್ಲಿಸಲಾಗಿದೆ. ಆದರೆ ಇಂದು ಡಿಕೆಶಿ ನೀಡಿದ ಹೇಳಿಕೆಯಲ್ಲಿ ಟಿವಿ 9 ಸ್ಥಗಿತಕ್ಕೆ ತಾವಾಗಲೇ ಸರ್ಕಾರವಾಗಲೀ ಕಾರಣವಲ್ಲ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ