ಕಾವೇರಿ-ಕಷ್ಣೆಗಾಗಿ ವಕೀಲರಿಗೆ ಮಾಡಿದ ವೆಚ್ಚ ಎಷ್ಟು ಗೊತ್ತೆ!

ಶನಿವಾರ, 1 ಅಕ್ಟೋಬರ್ 2016 (15:16 IST)
ಕಾವೇರಿ ಹಾಗೂ ಕೃಷ್ಣ ನ್ಯಾಯಾಧೀಕರಣದ ವಾದ ಮಂಡಿಸಲು ವಕೀಲರಿಗೆ ನೀಡಿದ ಹಣವನ್ನು ರಾಜ್ಯ ಸರಕಾರ ಮರಳಿ ಪಡೆಯಬೇಕೆಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಹಾಗೂ ಕೃಷ್ಣ ನ್ಯಾಯಾಧೀಕರಣಕ್ಕೆ ಇಲ್ಲಿಯವರೆಗೂ ರಾಜ್ಯ ಸರಕಾರ 76.21 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಆದರೆ, ಎರಡು ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ರಾಜ್ಯದ ಪರ ವಕೀಲರು ವಿಫಲರಾಗಿದ್ದಾರೆ. ಈವರೆಗೂ ಕಾವೇರಿ ನ್ಯಾಯಾಧೀಕರಣದ ಮುಂದೆ 580 ಬಾರಿ ವಿಚಾರಣೆ ನಡೆದಿದೆ . ಇದಕ್ಕಾಗಿ ಸರಕಾರದ ಪರ ವಕೀಲರಿಗೆ 36.52 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. 
 
ಕೃಷ್ಣ ನ್ಯಾಯಾಧೀಕರಣದ ಮುಂದೆ 306 ಸಿಟಿಂಗ್ ಆಗಿದ್ದು, ಇದಕ್ಕಾಗಿ ಸರಕಾರಿ ವಕೀಲರಿಗೆ 36.67 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ 9 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಇದರಲ್ಲಿ ದೆಹಲಿಯ ಹಿರಿಯ ವಕೀಲ ಅನಿಲ ದಿವಾನ್ ಅವರಿಗೆ ಕಾವೇರಿ ಹಾಗೂ ಕೃಷ್ಣಗಾಗಿ 26.26 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರವಾಗಿ ವಾದ ಮಂಡಿಸುವ ಫಾಲಿ ನಾರಿಮನ್ ಅವರಿಗೆ 14.76 ಕೋಟಿ ರೂಪಾಯಿ ಸೇರಿದಂತೆ 10 ವಕೀಲರಿಗಾಗಿ ರಾಜ್ಯ ಸರಕಾರ ಕೋಟಿ ಕೋಟಿ ವೆಚ್ಚ ಮಾಡಿದ್ದರೂ ನ್ಯಾಯಾಲಯದಲ್ಲಿ ರಾಜ್ಯಕ್ಕೆ ಹಿನ್ನೆಡೆಯಾಗಿದೆ. ಹೀಗಾಗಿ ಈವರೆಗೂ ವೆಚ್ಚ ಮಾಡಿರುವ ಹಣವನ್ನು ಅವರಿಂದ ರಾಜ್ಯ ಸರಕಾರ ವಾಪಸ್ ಪಡೆಯಬೇಕು ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ