ವೈದ್ಯರ ನಿರ್ಲಕ್ಷ: ಗರ್ಭದಲ್ಲಿ ಮಗು ಸತ್ತು 24 ಗಂಟೆಗಳಾದರೂ ಇಲ್ಲ ಚಿಕಿತ್ಸೆ

ಮಂಗಳವಾರ, 1 ಮಾರ್ಚ್ 2016 (11:24 IST)
ಗರ್ಭದಲ್ಲಿ ಮಗು ಸತ್ತು 22 ಗಂಟೆಯಾದರೂ ಗರ್ಭಿಣಿಗೆ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ ತೋರಿದ ಘಟನೆ ಗದಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 
 
ನಿನ್ನೆ ಬೆಳಿಗ್ಗೆ 11 ಗಂಟೆಗೆ ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಂಜುಳಾ ಮುದಿಗೌಡರ್ ಅವರನ್ನು ಗದಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತಪಾಸಣೆ ನಡೆಸಿದ ಸ್ತ್ರೀರೋಗ ತಜ್ಞೆ ಶ್ರುತಿ ಪಾಟೀಲ್ ಗರ್ಭದಲ್ಲಿಯೇ ಮಗು ಸತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಮಗುವನ್ನು ಹೊರ ತೆಗೆಯುವ, ಅಸ್ವಸ್ಥ ಮಂಜುಳಾಗೆ ಚಿಕಿತ್ಸೆ ಕೊಡುವ ಗೋಚಿಗೆ ಹೋಗಿಲ್ಲ. ಹೀಗಾಗಿ ಕಳೆದ 24 ಗಂಟೆಯಿಂದ ಆಕೆ ಅಸಾಧ್ಯ ನೋವಿನಿಂದ, ವಿಪರೀತ ಜ್ವರದಿಂದ ನರಳುತ್ತಿದ್ದಾಳೆ. 
 
ರಾತ್ರಿ ಪಾಳಿಯಲ್ಲಿದ್ದರೂ ಶ್ರುತಿ ಪಾಟೀಲ್ ಆಸ್ಪತ್ರೆಗೆ ಬರದೆ ಅಮಾನವೀಯತೆ, ಬೇಜಬ್ದಾರಿತನವನ್ನು ಮೆರೆದಿದ್ದಾರೆ. 
 
ವೈದ್ಯರೇ ಬಂದಿಲ್ಲ ಎಂದ ಮೇಲೆ ನಾವು ಹೇಗೆ ತಾನೇ ಚಿಕಿತ್ಸೆ ಕೊಡಲು ಸಾಧ್ಯವೆಂದು ಅಲ್ಲಿನ ನರ್ಸ್‌ಗಳು ಮಹಿಳೆಯ ಸಂಬಂಧಿಕರ ಬಳಿ ತಮ್ಮ ಅಸಹಾಯಕತೆಯನ್ನು ತೋಡಿಕತೊಂಡಿದ್ದಾರೆ.
 
ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಉನ್ನತ ವೈದ್ಯಾಧಿಕಾರಿಗಳು ಬಂದು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ