ವೈದ್ಯರ ರಾಜೀನಾಮೆ ಎಫೆಕ್ಟ್: ನವಜಾತ ಶಿಶು, ಮತ್ತೊಬ್ಬ ವ್ಯಕ್ತಿ ಸಾವು

ಮಂಗಳವಾರ, 28 ಅಕ್ಟೋಬರ್ 2014 (11:48 IST)
ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆಯ ಎಫೆಕ್ಟ್ ಅನೇಕ ಜಿಲ್ಲಾಸ್ಪತ್ರೆಗಳಲ್ಲಿ ಕಾಣಿಸಿಕೊಂಡಿದೆ. ಚಿತ್ರದುರ್ಗದಲ್ಲಿ ಕಣ್ಣು ಬಿಡುವ ಮುನ್ನವೇ ನವಜಾತ ಶಿಶುವೊಂದು ಚಿಕಿತ್ಸೆಯ ಕೊರತೆಯಿಂದ ದಾರುಣವಾಗಿ ಮೃತಪಟ್ಟಿದೆ. ಹೆರಿಗೆಗೆಂದು ಬಂದಿದ್ದ ಮಹಿಳೆಗೆ ವೈದ್ಯರಿಲ್ಲದೇ ದಾದಿಯರೇ ಹೆರಿಗೆ ಮಾಡಿಸಿದ್ದರು.ಆದರೆ ಹುಟ್ಟಿದ ಮಗುವಿಗೆ ಸೂಕ್ತ ಚಿಕಿತ್ಸೆ ಸೌಲಭ್ಯವಿಲ್ಲದೇ ಮಗು ಸಾವನ್ನಪ್ಪಿದೆ.

 ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತುಂಬುಗ ರ್ಭಿಣಿಯಾಗಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಯ ಸಿಬ್ಬಂದಿ ವೈದ್ಯರಿಲ್ಲದ ಕಾರಣದ ಮೇಲೆ ಹೊರಹಾಕಿದ ಘಟನೆ ನಡೆದಿದೆ. ಸಿಸೇರಿಯನ್ ಮಾಡುವುದಕ್ಕೆ ವೈದ್ಯರಿಲ್ಲ, ಬರೀ ದಾದಿಯರು ಇರುವುದರಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲವೆಂದು ಹೇಳಿ ವಾಪಸು ಕಳಿಸಿದರು.  ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ರೋಗಿಯೊಬ್ಬನ ಸ್ಥಿತಿಗತಿ ಚಿಂತಾಜನಕವಾಗಿದ್ದು, ನೆಲದ ಮೇಲೆ ಮಲಗಿಕೊಂಡು ವಿಲ ವಿಲ ನರಳಾಡುತ್ತಿದ್ದರು.

ಅನೇಕ ರೋಗಿಗಳು ಚಿಕಿತ್ಸೆ ಇಲ್ಲದೇ ಪರದಾಡುತ್ತಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಹೃದಯಾಘಾತಕ್ಕೊಳಗಾದ ಬಾಬೂಜಿ ಎಂಬವರು ಚಿಕಿತ್ಸೆ ನೀಡಲು ವೈದ್ಯರಿಲ್ಲದೇ ಮೃತಪಟ್ಟಿದ್ದಾರೆ. ಸಕಲೇಶಪುರದಲ್ಲಿ ಏಳು ಮಂದಿ ವೈದ್ಯರ ಪೈಕಿ 6 ಮಂದಿ ವೈದ್ಯರು ರಾಜೀನಾಮೆ ನೀಡಿದ್ದರು. ಬಾಬೂಜಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಯಾವುದೇ ಚಿಕಿತ್ಸೆ ಸಿಗದಿದ್ದರೆ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಸರ್ಕಾರ ಮತ್ತು ವೈದ್ಯರ ನಡುವೆ ತಿಕ್ಕಾಟಕ್ಕೆ ಒಂದು ಬಡಜೀವ ಬಲಿಯಾಗಿದೆ. 

ವೆಬ್ದುನಿಯಾವನ್ನು ಓದಿ