ಕಾವೇರಿ ಜಲಾನಯನ ಪ್ರದೇಶದ ಒಟ್ಟು 48 ತಾಲೂಕುಗಳ ಪೈಕಿ 42 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆಯೆಂದು ಅಕ್ಟೋಬರ್ 17 ರಂದು ಕೇಂದ್ರ ತಜ್ಞರ ತಂಡ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು. ಆದರೆ, ಕರ್ನಾಟಕದ ಹೇಳಿಕೆಯನ್ನು ತಮಿಳುನಾಡು ಒಪ್ಪಿಕೊಂಡಿಲ್ಲ.
ಮುಂಗಾರು ಬೆಳೆ ಅವಧಿಯಲ್ಲಿ 193 ಟಿಎಂಸಿ ನೀರು ಬಳಸಿಕೊಳ್ಳಲು ಕರ್ನಾಟಕಕ್ಕೆ ಅವಕಾಶ ಇದೆ. ಈಗಾಗಲೇ ಕರ್ನಾಟಕ 112 ಟಿಎಂಸಿ ನೀರನ್ನು ನೀರಾವರಿಗೆ ಹಾಗೂ 12 ಟಿಎಂಸಿ ನೀರನ್ನು ಕುಡಿಯಲು ಬಳಸಿಕೊಂಡಿದೆ. ಹಾಗೂ ನೀರಾವರಿಗಾಗಿ ಇನ್ನೂ 36.38 ಟಿಎಂಸಿ ನೀರನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ. ಇದರೊಂದಿಗೆ ಕರ್ನಾಟಕ ನೀರಾವರಿಗಾಗಿ 149 ಟಿಎಂಸಿ ನೀರು ಬಳಸಿಕೊಂಡತ್ತಾಗುತ್ತದೆ. ಹೀಗಾಗಿ ಕಾವೇರಿ ಕೊಳ್ಳದ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಕರ್ನಾಟಕ ಸರಕಾರ ಘೋಷಿಸಿದ್ದು ಸರಿಯಲ್ಲ ಎಂದು ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ತಕರಾರು ಸಲ್ಲಿಸಿದೆ.