ಐದು ತಿಂಗಳಲ್ಲಿ ಡಿವಿಎಸ್ ಆಸ್ತಿ 10.46 ಕೋಟಿ ಹೆಚ್ಚಳವಾಗಿದ್ದು ಹೇಗೆ?

ಶನಿವಾರ, 25 ಅಕ್ಟೋಬರ್ 2014 (13:04 IST)
2014ರ ಲೋಕಸಭೆ  ಚುನಾವಣೆಯಲ್ಲಿ ರೈಲ್ವೆ ಸಚಿವ ಸದಾನಂದ ಗೌಡರು ಘೋಷಿಸಿದ್ದ ಆಸ್ತಿ ಮೌಲ್ಯ 9.88 ಕೋಟಿ ರೂ. ಆದರೆ ಐದು ತಿಂಗಳಲ್ಲೇ  ಸದಾನಂದ ಗೌಡರ ಆಸ್ತಿ ಈಗ 20.35 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇಷ್ಟೊಂದು ಗಣನೀಯ ಪ್ರಮಾಣದಲ್ಲಿ 10.46 ಕೋಟಿ ರೂ. ಗೌಡರ ಆಸ್ತಿ ಹೆಚ್ಚಳವಾಗಿರುವುದು ಅನುಮಾನಕ್ಕೆ ಎಡೆಕಲ್ಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸದಾನಂದ ಗೌಡರು, 8.5 ಕೋಟಿ ಸಾಲ ಪಡೆದು ವ್ಯವಹಾರ ನಡೆಸಿದ್ದೇನೆ.ಇದು ನಾನು ನಡೆಸಿದ ವ್ಯವಹಾರದಿಂದ ಬಂದ ಆಸ್ತಿಯಾಗಿದೆ. ನನ್ನ ವಿರುದ್ಧ ಆರೋಪ ಸುಳ್ಳು ಎಂದು ಎಂದು ಗೌಡರು ಹೇಳಿದರು.

ಫಲಿತಾಂಶ ಘೋಷಣೆಗೂ ಮೊದಲೇ ಆಸ್ತಿ ಖರೀದಿಸಿದ್ದೆ. ಪ್ರಧಾನಿ ಕಾರ್ಯಾಲಯಕ್ಕೆಆಸ್ತಿ ವಿವರ ಸಲ್ಲಿಸಿದ್ದೇನೆ ಎಂದು ಡಿವಿಎಸ್ ಹೇಳಿದರು. ಈ ಸಂದರ್ಭದಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಎಲ್ಲಾ ರೈಲುಗಳೂ ಬರಲಿವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ