ನೇಪಾಳದಲ್ಲಿ ಭಾರೀ ಭೂಕಂಪ: ಭಾರತದಲ್ಲಿ 31 ಬಲಿ

ಶನಿವಾರ, 25 ಏಪ್ರಿಲ್ 2015 (15:51 IST)
ನೆರೆ ರಾಷ್ಟ್ರ ನೇಪಾಳದಲ್ಲಿ ಇಂದು ಭಾರೀ ಭೂಕಂಪ ಸಂಭವಿಸಿದ ಪರಿಣಾಮ ಅದರ ತೀವ್ರತೆ ಭಾರತಕ್ಕೂ ತಟ್ಟಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹಾಗೂ ಬಿಹಾರ ರಾಜ್ಯಗಳಲ್ಲಿ ಸಾವು ನೋವು ಸಂಭವಿಸಿದ್ದು, ಪರಿಣಾಮ ಒಟ್ಟು 31(ಬಿಹಾರ-20, ಉತ್ತರ ಪ್ರದೇಶ-8, ಪಶ್ಚಿಮ ಬಂಗಾಳ-3) ಮಂದಿ ಸಾವನ್ನಪ್ಪಿದ್ದಾರೆ. 
 
ಇಂದು ಬೆಳಗ್ಗೆ 11.45ರ ವೇಳೆಯಲ್ಲಿ ಸಂಭವಿಸಿದ ಭೂಕಂಪನ ಇಡೀ ಉತ್ತರ ಭಾರತವನ್ನು ನಡುಗಿಸಿತ್ತು. ಪರಿಣಾಮ ಕಟ್ಟಡ ಕುಸಿತ, ಬಿರುಕು ಹಾಗೂ ಮೇಲ್ಠಾವಣಿ ಕುಸಿತದಂತಹ ಅನಾಹುತಗಳು ಸಂಭವಿಸಿವೆ.  
 
ಎಲ್ಲಿ ಎಷ್ಟು ಮಂದಿ ದುರ್ಮರಣ ?
ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಜಲೈಗುರಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಇಲ್ಲಿನ ಆಸ್ಪತ್ರೆಯೊಂದರ ಮೇಲ್ಛಾವಣಿ ಕೂಡ ಕುಸಿದಿರುವ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಹೋರ ಕಳುಹಿಸಿ ರಕ್ಷಿಸಲಾಗಿದೆ.   
 
ಉತ್ತರ ಪ್ರದೇಶ ರಾಜ್ಯದಲ್ಲಿನ ಗ್ರಾಮೀಣ ಭಾಗದ ಮನೆಯೊಂದು ಕುಸಿದು ಬಿದ್ದಿದೆ. ಪರಿಣಾಮ ಮನೆಯ ಒಳಗಿದ್ದ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಅಂತೆಯೇ ರಾಜ್ಯದ ರಾಜಧಾನಿ ಲಖನೌನ ಮಾಲ್ಡಾಲ್ಲಿರುವ ಶಾಲಾ ಕಟ್ಟಡದವೊಂದರ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡದಲ್ಲಿ 40 ಮಂದಿ ಮಕ್ಕಳಿದ್ದರು ಎನ್ನಲಾಗಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಾಗಿದೆ ಎನ್ನಲಾಗಿದೆ. ಆದರೆ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.   
 
ಇನ್ನು ಬಿಹಾರದಲ್ಲಿಯೂ ಕೂಡ ತೀವ್ರತೆ ಹೆಚ್ಚಿದ ಪರಿಣಾಮ ಇಲ್ಲಿನ ಸೀತಾಮುರಿಯಲ್ಲಿ ಕಟ್ಟಡ ಕುಸಿದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಇಲ್ಲಿನ ದರ್ಬಂಗ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.    

ವೆಬ್ದುನಿಯಾವನ್ನು ಓದಿ