ನೇಪಾಳ ಭೂಕಂಪ: ಭಾರತದಲ್ಲಿ 51 ಸಾವು

ಭಾನುವಾರ, 26 ಏಪ್ರಿಲ್ 2015 (12:25 IST)
ನೆರೆ ರಾಷ್ಟ್ರ ನೇಪಾಳದಲ್ಲಿ ನಿನ್ನೆಯಿಂದ ನಿರಂತರವಾಗಿ ಭೂಕಂಪನ ಸಂಭವಿಸುತ್ತಿದ್ದು, ಕಂಪನದ ತೀವ್ರತೆ ಭಾರಕ್ಕೂ ವಾಪಿಸಿರುವ ಹಿನ್ನೆಲೆಯಲ್ಲಿ ಭಾರತದ 51 ನಾಗರೀಕರು ಸಾವನ್ನಪ್ಪಿದ್ದಾರೆ.

ಹೌದು, ನೇಪಾಳವು ಉತ್ತರ ಭಾರತಕ್ಕೆ ಹೊಂದಿಕೊಂಡಿರುವ ಕಾರಣ ಅಲ್ಲಿನ ಭೂಕಂಪನದ ತೀವ್ರತೆ ಭಾರತದ ರಾಜ್ಯಗಳಿಗೂ ತಟ್ಟಿದ್ದು, ಹಲವೆಡೆ ಕಟ್ಟಡಗಳು ಕುಸಿದಿವೆ. ಪರಿಣಾಮ ಇಲ್ಲಿವರೆಗೆ 51 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ. ನಿನ್ನೆ 35 ಮಂದಿಯನ್ನು ಮೃತರನ್ನು

ಪತ್ತೆ ಹಚ್ಚಲಾಗಿತ್ತು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇನ್ನು ಮೃತರ ಕುಟುಂಬಕ್ಕೆ ಈಗಾಗಲೇ ಕೇಂದ್ರ ಸರ್ಕಾರವು ತಲಾ ಎರಡು ಲಕ್ಷದಂತೆ ಪರಿಹಾರವನ್ನೂ ಘೋಷಿಸಿದೆ.

ಭೂಕಂಪನ ಪರಿಣಾಮ ಉತ್ತರ ಭಾರತದ ರಾಜ್ಯಗಳಾದ ಬಿಹಾರ ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅನಾಹುತ ಸಂಭವಿಸಿದ್ದು, ಸಾರ್ವಜನಿಕರು ಸಾವಿಗೀಡಾಗಿದ್ದಾರೆ.

ಇನ್ನು ಬಿಹಾರದಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇಲ್ಲಿಯವರೆಗೆ ಒಟ್ಟು 51 ಮಂದಿಯ ದೇಹಗಳನ್ನು ಹೊರ ತೆಗೆಯಲಾಗಿದೆ.

ವೆಬ್ದುನಿಯಾವನ್ನು ಓದಿ