ನೇಪಾಳದಲ್ಲಿ ಭಾರೀ ಭೂಕಂಪ: ಐತಿಹಾಸಿಕ ಭೀಮ್‌ಸೇನ್ ಟವರ್ ನೆಲಸಮ

ಶನಿವಾರ, 25 ಏಪ್ರಿಲ್ 2015 (14:16 IST)
ಇಂದು ಬೆಳಗ್ಗೆ 11.25ರ ವೇಳೆಯಲ್ಲಿ ಸಂಭವಿಸಿದ ಭೂಕಂಪನದಲ್ಲಿ ಇಲ್ಲಿನ ಪ್ರಖ್ಯಾತ ಹಾಗೂ ಐತಿಹಾಸಿಕ ಬಹು ಮಹಡಿ ಕಟ್ಟಡ ಭೀಮ್ ಸೇನ್ ಟವರ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, 400ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ ಎನ್ನಲಾಗಿದೆ. 
 
ಕಠ್ಮಂಡುವಿನ ಸುಂದಾರ ಎಂಬ ಪ್ರದೇಶದಲ್ಲಿ ಯೂರೋಪಿಯನ್ ಶೈಲಿಯಲ್ಲಿ ಕಟ್ಟಲಾಗಿರುವ 9 ಮಹಡಿಯುಳ್ಳ ಈ ಕಟ್ಟಡ ಇಂದು ಸಂಭವಿಸಿರುವ ಭೂ ಕಂಪನದಲ್ಲಿ ಸಂಪೂರ್ಣವಾಗಿ ಕುಸಿದಿದ್ದು, ಅವಶೇಷಗಳಡಿ 400ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿಲ್ಲ. 
 
ಇನ್ನು ಈ ಪರಿಣಾಮ ನೇಪಾಳ ರಕ್ಷಣಾ ಪಡೆಗಳು ಈಗಾಗಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೆ ಕಾರ್ಯಾಚರಣೆ ಹಾಗೂ ಅನಾಹುತದ ಬಗ್ಗೆ ಮಾಹಿತಿ ತಿಳಿಯಲು ಪ್ರಧಾನಿ ಮೋದಿ ಅವರು ನೇಪಾಳ ಪ್ರಧಾನಿ ಸುಶೀಲ್ ಕುಮಾರ್ ಹಾಗೂ ಭೂತಾನ್ ರಾಜರಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸುವ ಸಾಮರ್ಥ್ಯ ನೇಪಾಳಕ್ಕೆ ಇಲ್ಲ ಎಂಬ ಸಂಶಯ ಲಭ್ಯವಾಗಿದ್ದು, ಕಾರ್ಯಾಚರಣೆಗೆ ಬಾರತ ಸಹಾಯಸ್ತ ಚಾಚಲಿದೆ ಎಂದು ಹೇಳಲಾಗಿದೆ. 
 
ಇನ್ನು ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಉತ್ತರ ಭಾರತದ ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಭಾರತದಲ್ಲಿ ಆಗಿರುವ ಅನಾಹುತ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.   
 
ಘಟನೆ ಹಿನ್ನೆಲೆ: ನೇಪಾಳದ ಲುಂಜಂಗ್ ಎಂಬ ಪ್ರದೇಶ ಭೂ ಕಂಪನದ ಕೇಂದ್ರ ಬಿಂದುವಾಗಿದ್ದು, ಇಂದು ಬೆಳಿಗ್ಗೆ 11.26ರಿಂದ 11.29ರ ವರೆಗೆ ಸುಮಾರು ಮೂರು ನಿಮಿಷಗಳ ಕಾಲ ಅಗಾಧವಾಗಿ ಭೂಮಿ ನಡುಗಿತ್ತು. ಭೂ ಕಂಪನದ ಪ್ರಮಾಣ ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, 7.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ತಿಳಿಸಿದ್ದರು. 32 ನಿಮಿಷಗಳ ಒಳಗೆ ನೇಪಾಳದಲ್ಲಿ 10 ಭಾರಿ ಕಂಪನ ಸಂಭವಿಸಿದೆ. 

ವೆಬ್ದುನಿಯಾವನ್ನು ಓದಿ