ಭೂಕಂಪ: ನಿಧಿ ಸಂಗ್ರಹಿಸಿದ ನೇಪಾಳ ವಿದ್ಯಾರ್ಥಿಗಳು

ಮಂಗಳವಾರ, 28 ಏಪ್ರಿಲ್ 2015 (17:58 IST)
ನೇಪಾಳದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದ್ದು, ಅವರ ನೆರವಿಗಾಗಿ ನೇಪಾಳ ಮೂಲದ ಬೆಂಗಳೂರಿನ ವಿದ್ಯಾರ್ಥಿಗಳು ಪರಿಹಾರ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. 
 
ನಗರದ ಮಲ್ಲೇಶ್ವರಂ ಮೈದಾನದಿಂದ ನಗರದೆಲ್ಲೆಡೆ ಸುಮಾರು 15 ಕಿ. ಮೀ ದೂರ ಕ್ರಮಿಸಿದ ವಿದ್ಯಾರ್ಥಿಗಳು ಪರಿಹಾರ ಸಂಗ್ರಹಿಸಲು ಮುಂದಾದರು. 
 
ಈ ಪರಿಹಾರ ಸಂಗ್ರಹಣಾ ರ್ಯಾಲಿಗೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವತ್ಥ್ ನಾರಾಯಣ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ರ್ಯಾಲಿಗೆ ಚಾಲನೆ ನೀಡಿದರು. 
 
ಇನ್ನು ಈ ಪರಿಹಾರ ಸಂಗ್ರಹಣಾ ರ್ಯಾಲಿಯಲ್ಲಿ ನೇಪಾಳ ಮೂಲದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಫಾರ್ಮಸಿಸ್ಟ್‌ಗಳು, ಎಂಜಿನಿಯರ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿದ್ದರು. ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಲಾಯಿತು.    

ವೆಬ್ದುನಿಯಾವನ್ನು ಓದಿ