ವಿದ್ಯುತ್ ಶಾಕ್‌ನಿಂದ ಅಜ್ಜಿ-ಮೊಮ್ಮಗ ಸಾವು

ಭಾನುವಾರ, 8 ಫೆಬ್ರವರಿ 2015 (16:15 IST)
ವಿದ್ಯುತ್ ಸ್ಪರ್ಶಿಸಿ ಅಜ್ಜಿ ಮತ್ತು ಮೊಮ್ಮಗ ಇಬ್ಬರು ಮೃತ ಪಟ್ಟ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
 
ಸುರಪುರ ತಾಲ್ಲೂಕಿನ ಹುಣಸಗಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಮೊದಲು ಮೊಮ್ಮಗ ವೀರೇಶನಿಗೆ (7) ವಿದ್ಯುತ್ ಶಾಕ್ ತಗಲಿದೆ. ಆತ ಅಪಾಯದಲ್ಲಿರುವುದನ್ನು ತಪ್ಪಿಸಲು ಹೋದ ಆತನ ಅಜ್ಜಿ ಗೌರಮ್ಮ (55) ದೇಹದಲ್ಲಿ ಕೂಡ ವಿದ್ಯುತ್ ಪ್ರವಹಿಸಿ ಇಬ್ಬರು ಕೂಡ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
 
ಪುಟ್ಟ ಮಗು ಮತ್ತು ಮನೆಯ ಹಿರಿಯ ಸದಸ್ಯರನ್ನು ಕಳೆದುಕೊಂಡ ಪರಿವಾರದವರ ಶೋಕ ಮುಗಿಲು ಮುಟ್ಟಿದೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಹುಣಸಗಿ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ