ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಜೆಸಿಬಿ ಯಂತ್ರಗಳು

ಮಂಗಳವಾರ, 2 ಫೆಬ್ರವರಿ 2016 (11:13 IST)
ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ಒತ್ತುವರಿ ತೆರವು ಕಾರ್ಯನಡೆಯಿತು. ಗೋಪಾಲನ್ ಎಂಟರ್‌ಪ್ರೈಸಸ್ ಸಂಸ್ಥೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಉಪವಿಭಾಗಾಧಿಕಾರಿ ಎ.ಸಿ.ನಾಗರಾಜ್ ನೇತೃತ್ವದಲ್ಲಿ 200 ಕೋಟಿ ರೂ. ಮೌಲ್ಯದ ಜಮೀನಿನ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. 2.25 ಎಕರೆ ಜಾಗದಲ್ಲಿ ಕಾಂಪೌಂಡ್ ಕೂಡ ನಿರ್ಮಿಸಲಾಗಿತ್ತು.

ಜೆಸಿಬಿ ಯಂತ್ರದಿಂದ ಈ ಕಾಂಪೌಂಡ್ ಕೆಡುವ ಮೂಲಕ ಒತ್ತುವರಿಯಿಂದ ಜಮೀನನ್ನು ಮುಕ್ತಗೊಳಿಸಲಾಗಿದೆ. ಜಯನಗರದ ಬಳಿಯ ಭೈರಸಂದ್ರದಲ್ಲಿ ಕೂಡ 5.39 ಎಕರೆ 500 ಕೋಟಿ ರೂ. ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಲಾಗದಿತ್ತು. ಒತ್ತುವರಿದಾರರು ಆ ಜಮೀನನ್ನು ಇನಾಂ ಭೂಮಿ ಎಂದು ವಾದಿಸುತ್ತಿದ್ದು, ಲಕ್ಷ್ಮಮ್ಮ ಎಂಬವರು ಕಾಂಪೌಂಡ್ ನಿರ್ಮಿಸಿ ಗೇಟ್ ಹಾಕಿದ್ದರು. ಅದಕ್ಕೆ ಸರಿಯಾದ ದಾಖಲೆಗಳನ್ನು ಕೂಡ ಹಾಜರುಪಡಿಸಿರಲಿಲ್ಲ.

ಡಿಎಲ್‌ಆರ್ ಪ್ರಾಜೆಕ್ಟ್ ಎಂಬ ಖಾಸಗಿ ಸಂಸ್ಥೆ ಲಕ್ಷ್ಮಮ್ಮರಿಂದ ಜಮೀನು ಪಡೆದುಕೊಂಡು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಜಿಲ್ಲಾಡಳಿತ ಕೋರ್ಟ್ ಆದೇಶದ ಮೇಲೆ ಈ ಜಮೀನಿನ ಒತ್ತುವರಿ ತೆರವು ಮಾಡಿ ವಶಕ್ಕೆ ತೆಗೆದುಕೊಂಡಿದೆ. ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಶಿಖಾಗೆ ಕೋರ್ಟ್ ಆದೇಶ ಬಂದ ಬಳಿಕ ಒತ್ತುವರಿ ತೆರವಿಗೆ ಕ್ರಮ ಕೈಗೊಂಡರು. 

ವೆಬ್ದುನಿಯಾವನ್ನು ಓದಿ