ಸಿರಿಯಾ, ಇರಾಕ್‌ಗೆ ಸೇನೆ ಕಳಿಸುವುದು ದೊಡ್ಡ ಪ್ರಮಾದ: ಹಿಲರಿ ಕ್ಲಿಂಟನ್

ಗುರುವಾರ, 4 ಫೆಬ್ರವರಿ 2016 (17:08 IST)
ತಾವು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ಯುದ್ಧಪೀಡಿತ ಇರಾಕ್ ಅಥವಾ ಸಿರಿಯಾಕ್ಕೆ ಅಮೆರಿಕ ಸೇನೆಯನ್ನು ಕಳಿಸುವುದಿಲ್ಲ ಎಂದು ಡೆಮಾಕ್ರಟಿಕ್ ಅಧ್ಯಕ್ಷ ಚುನಾವಣೆ ಮುಂಚೂಣಿಯಲ್ಲಿರುವ ಹಿಲರಿ ಕ್ಲಿಂಟನ್ ಭರವಸೆ ನೀಡಿದರು.  ಇರಾಕ್ ಅಥವಾ ಸಿರಿಯಾಕ್ಕೆ ಸೇನೆ ಕಳಿಸುವುದು ಭಯಂಕರ ಪ್ರಮಾದವೆಂದು ಬಣ್ಣಿಸಿದ ಅವರು ಅಮೆರಿಕದ ಯುದ್ಧ ಪಡೆಗಳ ವಿದೇಶಿ ನಿಯೋಜನೆ ಕುರಿತು ಬ್ಲಾಂಕೆಟ್ ಹೇಳಿಕೆ ನೀಡುವುದಕ್ಕೆ ಅವರು ನಿರಾಕರಿಸಿದರು. 
 
 ಅಮೆರಿಕ ಎದುರಿಸುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ವಿಶೇಷ ಪಡೆಗಳನ್ನು ಅಮೆರಿಕ ಬಳಸಲಿದೆ ಎಂದು ಹ್ಯಾಂಪ್‌ಶೈರ್ ಸಭಿಕರಿಗೆ ತಿಳಿಸಿದರು. ಭಯೋತ್ಪಾದಕ ಸಂಘಟನೆಗಳ ಜಾಲವು ಉತ್ತರ ಆಫ್ರಿಕಾದಿಂದ ದಕ್ಷಿಣ ಏಷ್ಯಾದವರೆಗೆ ಹರಡಿಕೊಂಡಿದ್ದು, ಸ್ನೇಹಿತರಿಗೆ, ಮೈತ್ರಿದೇಶಗಳಿಗೆ ಮತ್ತು ನಮಗೂ ಗಂಭೀರ ಬೆದರಿಕೆಯೊಡ್ಡಿದೆ ಎಂದು ಕ್ಲಿಂಟನ್ ಹೇಳಿದರು. ನಾವು ದೇಶವನ್ನು ಸುರಕ್ಷಿತವಾಗಿಡಬೇಕಿದೆ.

ಐಸಿಸ್ ಸೋಲಿಸಲು, ಭಯೋತ್ಪಾದನೆ ಬೆದರಿಕೆ ಅಂತ್ಯಕ್ಕೆ ಉಳಿದ ದೇಶಗಳ ಜತೆ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಆದ್ದರಿಂದ ನಾವು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಕ್ಲಿಂಟನ್ ಹೇಳಿದರು. 

ವೆಬ್ದುನಿಯಾವನ್ನು ಓದಿ