ಮಾಜಿ ಸಿಎಂ ಬಂಗಾರಪ್ಪ ಪತ್ನಿ ಶಕುಂತಲಾ ಬಂಗಾರಪ್ಪ ವಿಧಿವಶ

ಮಂಗಳವಾರ, 22 ಏಪ್ರಿಲ್ 2014 (16:05 IST)
ಬೆಂಗಳೂರು: ಮಾಜಿ ಸಿಎಂ ದಿವಂಗತ  ಪತ್ನಿ ಶಕುಂತಲಾ ಬಂಗಾರಪ್ಪ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಶಕುಂತಲಾ ಅವರು ಕೆಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರಿಂದ ಮಲ್ಯ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು.

ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಅವರು ವಿಧಿವಶರಾಗಿದ್ದಾರೆ. ಪುತ್ರಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯುವುದಕ್ಕೆ ಶಕುಂತಲಾ ಬೆಂಬಲಿಸಿದ್ದರು ಮತ್ತು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮಗಳ ಜತೆ ಕಾಣಿಸಿಕೊಂಡಿದ್ದರು.

ಕುಮಾರ್ ಬಂಗಾರಪ್ಪ, ಮಧುಬಂಗಾರಪ್ಪ, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.   ಸದಾಶಿವನಗರದ ಅವರ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನದ ಸಲುವಾಗಿ ಇಡಲಾಗಿದೆ. ನಾಳೆ ಸೊರಬ ಬದಿಯ ಬಂಗಾರಧಾಮದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತದೆ. ರಾಘವೇಂದ್ರ ರಾಜಕುಮಾರ್, ಪುತ್ರಿ ಗೀತಾ, ಶಿವರಾಜ್ ಕುಮಾರ್  ಆಸ್ಪತ್ರೆಗೆ ಭೇಟಿ ನೀಡಿದರು.
 

ವೆಬ್ದುನಿಯಾವನ್ನು ಓದಿ