ಮಾಜಿ ಸಚಿವ ಎಚ್‌ವೈ ಮೇಟಿಗೆ ಸಿಐಡಿಯಿಂದ ಕ್ಲೀನ್ ಚಿಟ್

ಬುಧವಾರ, 24 ಮೇ 2017 (12:46 IST)
ಮಾಜಿ ಸಚಿವ ಎಚ್.ವೈ.ಮೇಟಿಯಿಂದ ಮಹಿಳೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸಿಐಡಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದಾರೆ
 
ಮಹಿಳೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಈ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರತರಣ ದಾಖಲಾಗಿಲ್ಲ. ನಮ್ಮದು ತಂದೆ ಮತ್ತು ಮಗಳ ಸಂಬಂಧ ಎಂದು ಶಂಕಿತ ಮಹಿಳೆಯೇ ಹೇಳಿದ್ದಾಳೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
 
ಮಾಧ್ಯಮಗಳಿಗೆ ಪ್ರಸಾರವಾದ ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ವಿಧಿ ವಿಜ್ಞಾನ ವರದಿಯಲ್ಲಿ ಬಹಿರಂಗವಾಗಿದೆ.

ಸಿಐಡಿ ತನಿಖೆಗೆ ಮಾಧ್ಯಮಗಳು ಸಹಕಾರ ನೀಡಲಿಲ್ಲ. ಪ್ರಕರಣದ ಅಸಲಿ ವಿಡಿಯೋ ಲಭ್ಯವಾಗದ ಹಿನ್ನೆಲೆಯಲ್ಲಿ ಸಮರ್ಪಕ ವಿಚಾರಣೆ ಸಾಧ್ಯವಾಗಿಲ್ಲ ಎಂದು ಸಿಐಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ