ಬರಹಗಾರ್ತಿ, ಮಾಜಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ಇನ್ನಿಲ್ಲ

ಭಾನುವಾರ, 25 ಜನವರಿ 2015 (16:08 IST)
ಮಾಜಿ ಕೇಂದ್ರ ಸಚಿವೆ,ಧಾರವಾಡ ಕ್ಷೇತ್ರದ ಮಾಜಿ ಸಂಸದೆ ಸರೋಜಿನಿ ಮಹಿಷಿ ಅವರು ಉತ್ತರ ಪ್ರದೇಶದ ಗಾಜಿಯಾಬಾದ್‌ ನಿವಾಸದಲ್ಲಿ ಭಾನುವಾರ ನಿಧನ ಹೊಂದಿದ್ದಾರೆ, ಅವರಿಗೆ 88 ವರ್ಷ ಪ್ರಾಯ ವಯಸ್ಸಾಗಿತ್ತು.
 
ಸರೋಜಿನಿ ಮಹಿಷಿ ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜ್ಯ ಸಭಾ ಸದಸ್ಯೆ,ರಾಜ್ಯ ಸಭಾ ಉಪಸಭಾಪತಿಯಾಗಿಯೂ ಕೆಲಸ ನಿರ್ವಹಿಸಿದ್ದರು.
 
1983 ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರೋಜಿನಿ ಮಹಿಷಿ ಅವರು ರೇಲ್ವೇ ಇಲಾಖೆ ಮತ್ತು ಸಾರ್ವಜನಿಕ ವಲಯದ ಹುದ್ದೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕುರಿತಾಗಿ ''ಸರೋಜಿನಿ ಮಹಿಷಿ ವರದಿ'' ತಯಾರು ಮಾಡಿದ್ದರು.
 
ಬರಹಗಾರ್ತಿಯಾಗಿಯೂ ಹೆಸರು ಮಾಡಿದ್ದ ಸರೋಜಿನಿ ಅವರು ಕನ್ನಡ ಮತ್ತು ಹಿಂದಿ ಕಾದಂಬರಿಗಳನ್ನು ಹಿಂದಿಗೆ ಅನುವಾದ ಮಾಡಿದ್ದರು. ಡಿವಿಜಿ ಅವರ ಮಂಕು ತಿಮ್ಮನ ಕಗ್ಗವನ್ನು ಹಿಂದಿಗೆ ಅನುವಾದಿಸಿದ್ದರು.
 
ಕಳೆದ ಕೆಲ ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದ ಸರೋಜಿನಿ ಮಹಿಷಿ ಅವರು ದೆಹಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿ ಕೆಲ ಸನಿರ್ವಹಿಸಿದ್ದರು.
 

ವೆಬ್ದುನಿಯಾವನ್ನು ಓದಿ