ಶೂಟೌಟ್: ಹಿರಿಯ ಸಂಶೋಧಕ ಡಾ. ಎಂ. ಎಂ ಕಲಬುರಗಿ ಹತ್ಯೆ

ಭಾನುವಾರ, 30 ಆಗಸ್ಟ್ 2015 (10:41 IST)
ಹಿರಿಯ ಸಾಹಿತಿ 70 ವರ್ಷ ವಯಸ್ಸಿನ ಎಂ ಎಂ ಕಲಬುರ್ಗಿ ಅವರ ಮನೆಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿಗಳು ಎರಡು ಬಾರಿ ಗುಂಡಿನ ದಾಳಿ ನಡೆಸಿ, ಕಲಬುರ್ಗಿ ಅವರನ್ನು ಹತ್ಯೆ ಗೈದಿರುವ ಘಟನೆ ಇಂದು ಬೆಳಿಗ್ಗೆ 8.40ಕ್ಕೆ ನಡೆದಿದೆ.
 
ಡಾ.ಎಂ.ಎಂ.ಕಲಬುರ್ಗಿ ಹಂಪಿ ವಿವಿಯ ವಿಶ್ರಾಂತ ಕುಲಪತಿಗಳಾಗಿದ್ದು, ದೇಶದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. 
 
ಅಧ್ಯಾಪಕರಾಗಿ ಗ್ರಂಥ ಶಾಸ್ತ್ರ ಭೋಧಿಸುತ್ತಿದ್ದ ಕಲಬುರ್ಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ಚಿದಂನಾದ್ ಪ್ರಶಸ್ತಿ, ನಾಡೋಜ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
 
ದೇಶದ ಖ್ಯಾತ ಸಂಶೋಧಕರಾಗಿದ್ದ ಕಲಬುರ್ಗಿ ಸಾವು ದೇಶದ ಸಾಹಿತ್ಯ ಲೋಕಕ್ಕೆ ತುಂಬಲಾದ ನಷ್ಟವಾಗಿದೆ ಎಂದು ಮತ್ತೊಬ್ಬ ಹಿರಿಯ ಸಾಹಿತಿ ಚನ್ನವೀರ ಕಣವಿ ಸಂತಾಪ ಸೂಚಿಸಿದ್ದಾರೆ. ನಮ್ಮದು 50 ವರ್ಷಗಳ ಸ್ನೇಹವಾಗಿದ್ದು ಅವರ ಅಗಲಿಕೆ ತುಂಬಾ ನೋವು ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂಪಾ ಹೇಳಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಕಲ್ಯಾಣ ನಗರದಲ್ಲಿರುವ ಅವರ ನಿವಾಸಕ್ಕೆ ನುಗ್ಗಿದ ಶಸ್ತ್ರಾಸ್ತರಸಹಿತ ಯುವಕನೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಎರಡು ಬುಲೆಟ್'ಗಳು ತಲೆಗೆ ಹೊಕ್ಕಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ದಾಳಿ ನಡೆಸಿದ ಯುವಕ ಯಾರು ಹಾಗೂ ಅವನು ಯಾವ ಕಾರಣಕ್ಕಾಗಿ ದಾಳಿ ನಡೆಸಿದ ಎಂಬ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇದೀಗ ಡಾ. ಕಲಬುರಗಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಈ ಮೊದಲೂ ಕಲಬುರಗಿಯವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಅಹಿತಕರ ಘಟನೆ ಸಂಭವಿಸಿತ್ತು ಹೀಗಾಗಿ ಅವರ ನಿವಾಸಕ್ಕೆ ಪೋಲೀಸ್ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ