ಮಹದಿಯ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆಗೆ ಇಂದು ಮನವಿ ಸಾಧ್ಯತೆ

ಗುರುವಾರ, 18 ಡಿಸೆಂಬರ್ 2014 (11:08 IST)
ಐಎಸ್ಐಎಸ್ ಟ್ವಿಟ್ಟರ್ ಅಕೌಂಟ್ ನಿರ್ವಹಣೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾಗಿರುವ ಮೆಹದಿಯನ್ನು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ಮತ್ತೆ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನಗರದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಇಂದು ಮನವಿ ಮಾಡುವ ಸಾಧ್ಯತೆ ಇದೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡು, ಈ ಹಿಂದೆ ಆರೋಪಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಂದು ಹೆಟಚ್ಚಿನ ಮಾಹಿತ್ ಕಲಾ ಹಾಕುವ ಸಲುವಾಗಿ ಸುಮಾರು 5 ದಿನಗಳ ಅವಧಿಗೆ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿತ್ತು. ಆದರೆ ಆ ಅವಧಿ ನಿನ್ನೆಗೆ ಮುಗಿದಿದ್ದು, ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಹಾಗಾಗಿ ಆರೋಪಿಯನ್ನು ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಇಂದು ನಡೆಯುವ ವಿಚಾರಣೆಯಲ್ಲಿ ನ್ಯಾಯಾಧೀಶರ ಎದುರು ಮನವಿ ಮಾಡಲಿದ್ದೇವೆ. ಇನ್ನು ಮೆಹದಿಯ ತಂದೆ-ತಾಯಿಗೆ ಆತನನ್ನು ಭೇಟಿಯಾಗಲು ನಿನ್ನೆ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. 
 
ಶಮ್ಮಿ ವಿನ್ಸೆಂಟ್ ಎಂಬ ಹೆಸರಿನ ಟ್ವಿಟ್ಟರ್ ಅಕೌಂಟನ್ನು ತೆರೆದಿದ್ದ ಆರೋಪಿ ಐಎಸ್ಐಎಸ್‌ನ ಉಗ್ರವಾದ ವಿಡಿಯೋ ಹಾಗೂ ಅವರ ಕೃತ್ಯಗಳಿರುವ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದ. ಅಲ್ಲದೆ ಯುವಕರನ್ನು ಈ ಭಯೋತ್ಪಾದನಾ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಡಿ.13ರಂದು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದರು. 

ವೆಬ್ದುನಿಯಾವನ್ನು ಓದಿ