ಬಂಧಿತ ನಾಲ್ವರ ಶಂಕಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

ಸೋಮವಾರ, 12 ಜನವರಿ 2015 (09:44 IST)
ಭಟ್ಕಳ ಮೂಲದ ನಾಲ್ವರು ಶಂಕಿತರ ಬಂಧನಕ್ಕೆ ಸಂಬಂಧಿಸಿದಂತೆ ಅವರನ್ನು ಕುರಿತು  ಕುರಿತು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಪ್ರಮುಖ ಆರೋಪಿ ಅಫಕ್ ಐಎಂ ಸಂಘಟನೆ ಕೃಸ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ. ಭಟ್ಕಳದಲ್ಲಿ ಪಿಎಫ್ಐ ಅಧ್ಯಕ್ಷನಾಗಿದ್ದ. ಪಾಕ್‌ಗೆ ತೆರಳಿ ತರಬೇತಿ ಪಡೆದುಕೊಂಡಿದ್ದ.

ಅಫಕ್ ಸ್ವತಃ ತಾನೇ ಸ್ಫೋಟಕಗಳನ್ನು ತಯಾರಿಸುತ್ತಿದ್ದ. ಸಬೂರ್ ಸ್ಫೋಟಕ ವಸ್ತುಗಳನ್ನು ರವಾನೆ ಮಾಡುತ್ತಿದ್ದ. ಐಎಂ ಉಗ್ರರಿಗೆ ಬೇಕಾದ ಸ್ಫೋಟಕಗಳನ್ನು ಸಬೂರ್ ರವಾನಿಸುತ್ತಿದ್ದ.  ಶಂಕಿತ ಉಗ್ರ ಸದ್ದಾಂ ಹುಸೇನ್ ಸ್ಫೋಟಕ ತಂತ್ರಜ್ಞಾನದಲ್ಲಿ ನಿಪುಣನಾಗಿದ್ದ.

ಸೈಯದ್ ರಿಯಾಜ್ ಭಟ್ಕಳ್ ಸಂಬಂಧಿತನಾಗಿದ್ದಾನೆ.  ಬೆಂಗಳೂರಲ್ಲಿ ವಿವಿಧ ಪೊಲೀಸ್ ತಂಡಗಳು ಮೊಕ್ಕಾಂ ಹೂಡಿ ತನಿಖೆ ನಡೆಸುತ್ತಿವೆ. ದೇಶದ ಉಗ್ರರ ಚಟುವಟಿಕೆ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿವೆ. ದೇಶದ ಎಲ್ಲೆಡೆ ಯುವಕರನ್ನು ತಮ್ಮ ಸಂಘಟನೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದ ವಿಷಯವೂ ವಿಚಾರಣೆ ವೇಳೆ ಬಹಿರಂಗವಾಗಿದೆ. 

ವೆಬ್ದುನಿಯಾವನ್ನು ಓದಿ