ನಕಲಿ ಪ್ರಮಾಣ ಪತ್ರ ದಂಧೆ ಜಾಲ: 20 ಜನರ ಬಂಧನ

ಮಂಗಳವಾರ, 30 ಸೆಪ್ಟಂಬರ್ 2014 (18:57 IST)
ನಕಲಿ ಪ್ರಮಾಣಪತ್ರ ದಂಧೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. 7 ಸ್ಥಳಗಳಲ್ಲಿ ಏಕಕಾಲಕ್ಕೆ ಪೊಲೀಸರು ದಾಳಿ ನಡೆಸಿ 20 ಮಂದಿಯ ತಂಡವನ್ನು ಬಂಧಿಸಿದ್ದಾರೆ.

ಒಂದು ವರ್ಷದ ನಕಲಿ ಪ್ರಮಾಣ ಪತ್ರಕ್ಕೆ ಒಂದು ಸಾವಿರ ರೂ. 2 ವರ್ಷಗಳ ನಕಲಿ ಪ್ರಮಾಣಪತ್ರಕ್ಕೆ 2 ಸಾವಿರ ರೂ.ಗಳನ್ನು ಖದೀಮರು ಪಡೆಯುತ್ತಿದ್ದರು.25ಕ್ಕೂ ಹೆಚ್ಚು ಮೊಬೈಲ್‌ಗಳನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಕಲಿ ಎನ್‌ಒಸಿ ಪತ್ರ, ರಿಲೀವಿಂಗ್ ಪತ್ರ ಅಥವಾ ನಕಲಿ ಉದ್ಯೋಗ ಅನುಭವದ ಪ್ರಮಾಣಪತ್ರ ಮುಂತಾದವನ್ನು ನೀಡಿ ಹಣ ಪಡೆಯುತ್ತಿದ್ದರು. ನಕಲಿ ಕನ್ಸಲ್ಟೆನ್ಸಿ ಸಂಸ್ಥೆಯನ್ನು ನಡೆಸುತ್ತಿದ್ದ ಅವರು ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು.

ವೆಬ್ದುನಿಯಾವನ್ನು ಓದಿ