ಕೌಟುಂಬಿಕ ಕಲಹ: ಪತಿಯಿಂದ ಪತ್ನಿ ಮೇಲೆ ಆಸಿಡ್ ದಾಳಿ

ಭಾನುವಾರ, 21 ಸೆಪ್ಟಂಬರ್ 2014 (14:56 IST)
ಬೆಂಗಳೂರಲ್ಲಿ ಪತಿಯಿಂದಲೇ ಪತ್ನಿ ಮೇಲೆ ಆಸಿಡ್ ದಾಳಿ ಮಾಡಿದ ಅಮಾನುಷ ಘಟನೆ ನಡೆದಿದೆ. 27 ವರ್ಷದ ಉಲ್ಫತ್ ಬಾನು ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ವರ್ತೂರಿನ ಗಾಂಧಿ ಸರ್ಕಲ್ ಬಳಿ ಸಂಭವಿಸಿದೆ.  

ವರ್ತೂರಿನ ಗಾಂಧಿ ಸರ್ಕಲ್ ಬಳಿ ಪತಿ ಪತ್ನಿಯ ಮೈಮೇಲೆ ಏಕಾಏಕಿ ಸೀಸೆಯಿಂದ ಆಸಿಡ್ ಸುರಿದಿದ್ದರಿಂದ ತೀವ್ರ ಸುಟ್ಟಗಾಯಗಳಿಗೆ ಒಳಗಾದ ಪತ್ನಿಯನ್ನು ನಿಮ್ಹಾನ್ಸ್  ಆಸ್ಪತ್ರೆಗೆ ಸೇರಿಸಲಾಗಿದೆ. ಕೌಟುಂಬಿಕ ಕಲಹವೇ  ಪತಿ ಪತ್ನಿ ಮೇಲೆ ಆಸಿಡ್ ದಾಳಿ ಮಾಡಲು ಕಾರಣವೆಂದು ಹೇಳಲಾಗಿದೆ.

ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಲ್ಫತ್ ಬಾನು ಪತ್ನಿ ಫೈರೋಜ್ ಖಾನ್ ಎಂಬವನನ್ನು ಪೊಲೀಸರು ಬಂಧಿಸಿದರು.
 

ವೆಬ್ದುನಿಯಾವನ್ನು ಓದಿ