ರೈತ ನಿಂಗೇಗೌಡ ಆತ್ಮಹತ್ಯೆ ಪ್ರಕರಣ: ಅಂಬಿ ಭೇಟಿ

ಶುಕ್ರವಾರ, 26 ಜೂನ್ 2015 (12:57 IST)
ಜಿಲ್ಲೆಯ ಪಾಂಡವಪುರದ ಗಾಣದಹೊಸೂರು ರೈತ ನಿಂಗೇಗೌಡರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಾಜ್ಯದ ವಸತಿ ಸಚಿವ ಅಂಬರೀಶ್ ಅವರು ಭೇಟಿ ನೀಡಿ ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಓರ್ವ ರೈತನ ಸಾವಲ್ಲ, ದೇಶದಲ್ಲಿರುವ ಎಲ್ಲಾ ರೈತರ ದುಸ್ಥಿತಯ ಸಂಕೇತವಾಗಿದೆ. ಆದರೂ ಇಂತಹ ಅಹಿತಕರ ಘಟನೆಗಳು ನಡೆಯುತ್ತವೆ ಎಂದ ಸಚಿವರು, ಕುಟುಂಬಕ್ಕೆ ಸಾವನ್ನು ಸಹಿಸಿಕೊಳ್ಳುವ ಹಾಗೂ ಮೃತರಿಗೆ ದೇವರು ಶಾಂತಿ ಒದಗಿಸಲಿ ಎಂದ ಅವರು, ಬಳಿಕ ನನ್ನನ್ನು ಸ್ವತಃ ಮುಖ್ಯಮಂತ್ರಿಗಳೇ ಗ್ರಾಮಕ್ಕೆ ಕಳುಹಿಸಿದ್ದು ಸರ್ಕಾರದ ಪರವಾಗಿ ಆಗಮಿಸಿದ್ದೇನೆ. ಕುಟುಂಬಸ್ಥರು ಮನೆ ನಿರ್ಮಿಸಿಕೊಡಲು ಕೇಳಿದ್ದಾರೆ. ಅದನ್ನು ನಾನು ನನ್ನ ಇಲಾಖೆ ವತಿಯಿಂದಲೇ ಮಾಡಿಕೊಡುತ್ತೇನೆ. ಈ ವಿಚಾರದಲ್ಲಿ ರಾಜಕೀಯವಿಲ್ಲ. ಅಲ್ಲದೆ ನನ್ನಂತೆಯೇ ಯಡಿಯೂರಪ್ಪ, ದೇವೇಗೌಡ, ಪುಟ್ಟಣ್ಣಯ್ಯ, ಸುರೇಶ್ ಕುಮಾರ್ ಹೀಗೆ ಹಲವಾರು ನಾಯಕರು ಭೇಟಿ ನೀಡಿದ್ದಾರೆ. ಆದ್ದರಿಂದ ಕುಟುಂಬಕ್ಕೆ ಅನ್ಯಾಯವಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.
 
ಇದೇ ವೇಳೆ, ಘಟನೆ ನಡೆದು 24 ಗಂಟೆ ಕಳೆದರೂ ಕೂಡ ಸರ್ಕಾರದ ಪರವಾಗಿ ಯಾವೊಬ್ಬ ಸಚಿವರೂ ಬರಲಿಲ್ಲವಲ್ಲ ಏಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ವಿಷಯ ತಿಳಿದಿರಲಿಲ್ಲ, ಅಲ್ಲದೆ ನನ್ನದೇ ಆದ ಕೆಲ ಕಾರ್ಯಗಳಿದ್ದವು. ಈ ಹಿನ್ನೆಲೆಯಲ್ಲಿ ತಡವಾಗಿದೆ ಎಂದ ಅವರು, ನಾನು ಇಲ್ಲಿನ ಪರಿಸ್ಥಿತಿ ಬಗ್ಗೆ ವರದಿ ನೀಡಿದ ಬಳಿಕ ಪರಿಹಾರ ಹೆಚ್ಚಿಸುವುದೇ ಬೇಡವೇ ಎಂದು ಮುಖ್ಯಮಂತ್ರಿಗಳು ಅವಲೋಕಿಸಲಿದ್ದಾರೆ ಎಂದೂ ಸ್ಪಷ್ಟಪಡಿಸಿದರು. 
 
ಬಳಿಕ, ಕಬ್ಬಿಗೆ ಬೆಂಬಲ ನೀಡವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ 2014ರಲ್ಲೇ ಈ ಬಗ್ಗೆ ಭರವಸೆ ನೀಡಿದ್ದು, ಟನ್‌ವೊಂದಕ್ಕೆ 2500 ರೂ. ಬೆಂಬಲ ಬೆಲೆ ನೀಡಲಿದೆ ಎಂದರು. 
 
ಪ್ರಕರಣದ ಹಿನ್ನೆಲೆ: ನಿನ್ನೆ ಬೆಳಗ್ಗೆ ಕೆಲ ಆಲೆ ಮನೆಗಳಿಗೆ ಕಬ್ಬು ಪೂರೈಕೆ ಮಾಡಲು ಬೆಲೆ ನಿಗದಿಗೆ ತೆರಳಿದ್ದ ರೈತ ನಿಗೇಗೈಡ, ಬೆಳೆದ ಕ್ಬಬಿಗೆ ಸೂಕ್ತ ಬೆಲೆ ಸಿಗದ ಕಾರಣ ಮನನೊಂದು ಬೆಳೆದಿದ್ದ ಕಬ್ಬಿನ ಗದ್ದೆಗೆ ಬಂಕಿ ಹಚ್ಚಿ, ಅದೇ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅಂಬರೀಶ್ ರೈತನ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ