ಪುಟ್ಟ ಮಗುವನ್ನು ಸಿಗರೇಟ್‌ನಿಂದ ಸುಟ್ಟ ತಂದೆ

ಶುಕ್ರವಾರ, 3 ಜುಲೈ 2015 (10:59 IST)
ಜಿಲ್ಲೆಯ ತಾವರಗೇರಾ ಸಮೀಪದ ಬಚನಾಳ ಗ್ರಾಮದಲ್ಲಿ ತಂದೆಯೊಬ್ಬ ರಾಕ್ಷಸಿ ಕೃತ್ಯ ಮೆರೆದಿದ್ದಾನೆ. ಕುಡಿತದ ಅಮಲಿನಲ್ಲಿ ತನ್ನ ಒಂದುವರೆ ವರ್ಷದ ಪುಟ್ಟ ಮಗುವಿನ ದೇಹದ ತುಂಬಾ ಆತ ಸುಟ್ಟಿದ್ದಾನೆ.

ಆರೋಪಿಯನ್ನು ಈಶಪ್ಪ ಎಂದು ಗುರುತಿಸಲಾಗಿದ್ದು, ಬುಧವಾರ ರಾತ್ರಿ ಕುಡಿದು ಮನೆಗೆ ಬಂದ ಆತ ಒಂದುವರೆ ವರ್ಷದ ವಿಜಯ್ ದೇಹದ ಮೇಲೆ ಎಲ್ಲೆಂದರಲ್ಲಿ ಸಿಗರೇಟ್‌ನಿಂದ ಸುಟ್ಟಿದ್ದಾನೆ ಎಂದು ಪತ್ನಿ ಗೀತಾ ಆರೋಪಿಸಿದ್ದಾಳೆ .
 
ಗಂಡನ ಕುಕೃತ್ಯವನ್ನು ನೋಡಿ ಹೌಹಾರಿದ ಗೀತಾ ಆತನೊಂದಿಗೆ ಜಗಳಕ್ಕಿಳಿದಾಗ ಪತ್ನಿಯ ಮೇಲೂ ಆತ ಹಲ್ಲೆ ನಡೆಸಿದ್ದಾನೆ. 
 
ತನ್ನ ಪತಿಯ ವಿರುದ್ಧ ಗೀತಾ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾಳೆ. ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
 
ಹನುಮಸಾಗರದ ಗೀತಾಳಿಗೆ ಈಶಪ್ಪನ ಜತೆ ಕಳೆದ 3 ವರ್ಷಗಳ ಹಿಂದೆ ವಿವಾಹವಾಗಿತ್ತು. 

ವೆಬ್ದುನಿಯಾವನ್ನು ಓದಿ