ಕೊನೆಗೂ ಕಾರ್ಯಕಾರಿಣಿಯಲ್ಲಿ ಈಶ್ವರಪ್ಪಗೆ ಗೋಷ್ಠಿ ನಿಗದಿ

ಶನಿವಾರ, 6 ಮೇ 2017 (18:21 IST)
ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೊನೆಗೂ ಈಶ್ವರಪ್ಪಗೆ ಗೋಷ್ಠಿ ನಿಗದಿ ಮಾಡಲಾಗಿದೆ.
 
ನಿನ್ನೆ ಬಿಡಗಡೆಗೊಳಿಸಲಾದ ಗೋಷ್ಠಿ ನಿರ್ಣಯ ಪಟ್ಟಿಯಲ್ಲಿ ಈಶ್ವರಪ್ಪ ಹೆಸರಿಗೆ ಕೊಕ್ ನೀಡಲಾಗಿತ್ತು. ಆದರೆ, ಇಂದು ಈಶ್ವರಪ್ಪ ಕಾರ್ಯಕಾರಿಣಿಗೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಗೋಷ್ಠಿ ನಿಗದಿಪಡಿಸಲಾಗಿದೆ. ಬರಗಾಲದ ಕುರಿತಂತೆ ನಾಳೆ ನಿರ್ಣಯ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಒಬ್ಬರನ್ನೊಬ್ಬರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಬಹಿರಂಗ ಸತ್ಯವಾಗಿದೆ.
 
ಯಡಿಯೂರಪ್ಪ ಅಧ್ಯಕ್ಷೀಯ ಭಾಷಣದ ಆರಂಭದಲ್ಲಿ ಎಲ್ಲಾ ನಾಯಕರುಗಳ ಹೆಸರುಗಳನ್ನು ಹೇಳಿದರೂ ಈಶ್ವರಪ್ಪ ಮತ್ತು ಶೆಟ್ಟರ್ ಹೆಸರಗಳನ್ನು ಹೇಳದೇ ಉಭಯ ಸದನಗಳ ನಾಯಕರೇ ಎಂದು ಹೇಳಿ ಪರೋಕ್ಷವಾಗಿ ಟಾಂಗ್ ನೀಡಿದರು. 
 
 ರಾಜ್ಯ ಕಾರ್ಯಕಾರಿಣಿಯಲ್ಲಿರುವ ಅಜೆಂಡಾದ ಬಗ್ಗೆ ಮಾತನಾಡಬೇಕು. ವೈಯಕ್ತಿಕ ವಿಚಾರಗಳನ್ನು ಯಾವುದೇ ಕಾರಣಕ್ಕೂ ಪ್ರಸ್ತಾಪಿಸಬಾರದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಕಟ್ಟಪ್ಪಣೆ ಹೊರಡಿಸಿದ್ದರೂ ಇಬ್ಬರ ನಾಯಕರ ನಡುವಿನ ಮುನಿಸು ಮಾತ್ರ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ