ರಾಜಧಾನಿ ಬೆಂಗಳೂರಿನ ಕೆಂಗೇರಿ ಬಳಿ ನಿವೇಶನ ನೀಡುವುದಾಗಿ ಹೇಳಿ ವಂಚನೆ ಮಾಡಿದ ಆರೋಪದ ಮೇಲೆ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆಂಗೇರಿ ಬಳಿ ನಿವೇಶನ ನೀಡುವುದಾಗಿ ಹೇಳಿ, 1995 ರಿಂದಲೂ ಸಾರ್ವಜನಿಕರಿಂದ ಹಣ ಪಡೆದು ಇದುವರೆಗೂ ನಿವೇಶನ ನೀಡದ ಆರೋಪವನ್ನು ಸಿ.ಪಿ.ಯೋಗೇಶ್ವರ್ ಎದುರಿಸುತ್ತಿದ್ದಾರೆ.
ಮೆಗಾ ಟೌನ್‌ಶಿಫ್‌ನಲ್ಲಿ ನಿವೇಶನ ಪಡೆಯಲು ನೂರಾರು ಮಂದಿ ಹಣ ಹೂಡಿದ್ದರು. ಆದರೆ, ಇದುವರೆಗೂ ಯಾರಿಗೂ ನಿವೇಶನ ನೀಡದೆ ಇದ್ದು, ಹಾಗೂ ನೀಡಿದ ಹಣವನ್ನು ಹಿಂದಿರುಗಿಸದ ಹಿನ್ನೆಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ