ಲಾರಿಯಲ್ಲಿ ಆಕಸ್ಮಿಕ ಬೆಂಕಿ: ಮದ್ಯ ನಾಶ

ಗುರುವಾರ, 5 ಮಾರ್ಚ್ 2015 (11:38 IST)
ಮದ್ಯದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಲಾರಿಯಲ್ಲಿದ್ದ ಸಾವಿರಾರು ರೂಪಾಯಿಯ ಮದ್ಯ ಹಾಳಾಗಿರುವ ಘಟನೆ ನಗರದ ನಗರ ಪೊಲೀಸ್ ಠಾಣೆ ಎದುರು ಸಂಭವಿಸಿದೆ. 
 
ಮೂಲಗಳ ಪ್ರಕಾರ, ಈ ಮದ್ಯವನ್ನು ಹೊತ್ತೊಯ್ಯುತ್ತಿದ್ದ ಲಾರಿಯು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಮಖಂಡಿ ಕಡೆ ಸಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿದ ಕಾರಣ ಲಾರಿಯಲ್ಲಿದ್ದ ಮದ್ಯವೆಲ್ಲಾ ಹಾಳಾಗಿದ್ದು, ಪರಿಣಾಮ ಸಾವಿರಾರು ರೂ.ನಷ್ಟವಾಗಿದೆ. ಘಟನೆ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಘಟನೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮದ್ಯದ ಬಾಟಲಿಗಳ ನಡುವೆಯೇ ತಿಕ್ಕಾಟ ನಡೆದಿರುವ ಕಾರಣ ಬೆಂಕಿ ಉತ್ಪತ್ತಿಯಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ