ಹಾಸನದಲ್ಲಿ ಹೊತ್ತಿ ಉರಿಯುತ್ತಿದೆ ಕೆರೆ..!

ಸೋಮವಾರ, 8 ಮೇ 2017 (15:37 IST)
ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ರಾಜ್ಯದ ಮತ್ತೊಂದು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಸನದ ದೊಡ್ಡಬಸವನಹಳ್ಳಿ ಕೆರೆಯಲ್ಲಿ ಬಿಸಿಲ ಝಳದ ನಡುವೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.

ಹಿಂದೂಸ್ಥಾನ್ ಪೆಟ್ರೋಲಿಯಂನಿಂದ ಪೆಟ್ರೋಲ್ ತ್ಯಾಜ್ಯ ಕೆರೆಗೆ ಬಿಡಲಾಗುತ್ತಿರುವುದರಿಂದ ಈ ರೀತಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗುತ್ತಿದೆ. ಕುಡಿಯುವ ನೀರಿನ ಆಸರೆಯಾಗಿರುವ ಈ ಕೆರೆಯಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದು, ಜನ ಮತ್ತು ಜಾನುವಾರು ತತ್ತರಿಸುತ್ತಿದ್ದಾರೆ.

ಮಂಗಳೂರಿನಿಮದ ಹಾಸನಕ್ಕೆ ಇಲ್ಲಿ ಪೆಟ್ರೋಲಿಯಂ ಪೈಪ್ ಲೈನ್ ಇದ್ದು, ಇಲ್ಲಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೆಟ್ರೋಲ್ ಸರಬರಾಜಾಗುತ್ತಿದೆ. ಪೆಟ್ರೋಲ್ ತ್ಯಾಜ್ಯವಿದ್ದ ಕಾರಣ ಕೆರೆಯಲ್ಲಿ ಬಿಸಿಲ ತಾಪಮಾನದಿಂದ ಬೆಂಕಿ ಹೊತ್ತುಕೊಂಡ ಜ್ವಾಲೆ ಹತ್ತಾರು ಮೀಟರ್ ಎತ್ತರಕ್ಕೆ ಚಾಚಿದೆ. ಘಟನೆ ಕುರಿತಂತೆ ಸುತ್ತಮುತ್ತಲಿನ ಐದಾರು ಗ್ರಾಮಗಳ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ