ಮಧ್ಯ ರಾತ್ರಿ ಯುವತಿಯರ ಓಡಾಟವೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ: ಮಾತೇ ಮಹಾದೇವಿ

ಶನಿವಾರ, 7 ಜನವರಿ 2017 (14:11 IST)
ಮಧ್ಯ ರಾತ್ರಿ ನಂತರ ಬೀದಿಗಳಲ್ಲಿ ಹೆಣ್ಣುಮಕ್ಕಳು ಕಾಮುಕರಿಗೆ ಪ್ರಚೋದನೆ ನೀಡುತ್ತ ಓಡಾಡುತ್ತಿರುವುದರಿಂದಲೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಾತೆ ಮಹಾದೇವಿ ವಿವಾದ್ಮಕ ಹೇಳಿಕೆ ನೀಡಿದ್ದಾರೆ. 
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ವರ್ಷದ ಹೆಸರಿನಲ್ಲಿ ಹೆಣ್ಣುಮಕ್ಕಳ ಸ್ವೇಚ್ಛಾಚಾರದ ವರ್ತನೆ ತೋರುವುದು ಅವಮಾನಕರ. ಇಂಥ ಪ್ರಕರಣಗಳು ನಿಲ್ಲಬೇಕಾದರೆ ಹಣ್ಣುಮಕ್ಕಳು ಮೈ ತುಂಬಾ ಬಟ್ಟೆ ಧರಿಸಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕು. ಅತ್ಯಾಚಾರಗಳು ಹೆಚ್ಚಾಗುವಲ್ಲಿ ಅರ್ಧ ತಪ್ಪು ಹೆಣ್ಣು ಮಕ್ಕಳದು, ಇನ್ನರ್ಧ ತಪ್ಪು ಸಮಾಜದ್ದು ಎಂದು ದೂರಿದರು. 
 
ಇತ್ತೀಚಿನ ಸಿನಿಮಾ ಹಾಗೂ ದೃಶ್ಯ ಮಾಧ್ಯಮಗಳು ಇದಕ್ಕೆಲಾ ಕಾರಣ, ಇವುಗಳಿಗೆ ಕಡಿವಾಣ ಹಾಕಲೇಬೇಕು. ಅರಬ್ ದೇಶದಲ್ಲಿರುವಂತೆ ಕಠಿಣ ಕಾನೂನು ಹಾಗೂ ಆ ದೇಶಗಳಲ್ಲಿರುವ ವಸ್ತ್ರುಸಂಹಿತೆ ನಮ್ಮಲ್ಲಿಯೂ ಜಾರಿಗೆ ತರಬೇಕು ಎಂದು ಮಾತೆ ಮಹಾದೇವಿ ಒತ್ತಾಯಿಸಿದ್ದಾರೆ.
 
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎಂಜಿ ರಸ್ತೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಿದ್ದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭದ್ರತೆಗೆಂದು ಸಾವಿರಾರು ಪೊಲೀಸರ ನಿಯೋಜನೆಗೊಂಡಿದ್ದರಾದರೂ ಕಿಡಿಗೇಡಿಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ