ಮಣ್ಣಲ್ಲಿ ಮಣ್ಣಾದ ಐಪಿಎಸ್ ಅಧಿಕಾರಿ ಹರೀಶ್

ಶನಿವಾರ, 20 ಫೆಬ್ರವರಿ 2016 (12:53 IST)
ಚೆನ್ನೈನಲ್ಲಿ ಗುರುವಾರ ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿದ್ದ ಕರ್ನಾಟಕದ ಐಪಿಎಸ್ ಅಧಿಕಾರಿ ಎನ್. ಹರೀಶ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಕೋಲಾರ ಜಿಲ್ಲೆಯ ಮಾಲೂರಿನ ಗೇರುಪುರ ಗ್ರಾಮದಲ್ಲಿ ನಡೆಯಿತು.
 
ವೀರಶೈವ ಧಾರ್ಮಿಕ ಪದ್ಧತಿಯಂತೆ ಅವರನ್ನು ಮಣ್ಣು ಮಾಡಲಾಯಿತು. 
 
ಜಿಲ್ಲಾಡಳಿತದಿಂದ ವಂದನೆ ನೀಡಿದ ಬಳಿಕ, ಕುಶಾಲುತೋಪು ಸಿಡಿಸಿ ಪೊಲೀಸ್ ಇಲಾಖೆ ವತಿಯಿಂದ ಸಹ ಗೌರವ ವಂದನೆಯನ್ನು ಸಮರ್ಪಿಸಲಾಯಿತು. ಅವರ ಪೋಷಕರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 
 
ರಾತ್ರಿ ಊಟ ಮಾಡಿ ಮಲಗಿದ್ದ ಮಗ ಇದ್ದ ಹಾಸಿಗೆಯಲ್ಲೇ ಮೃತಪಟ್ಟಿದ್ದಾನೆ. ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಹಾಗಾಗಿ, ಆ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ’ ಎಂದು ಹರೀಶ್ ತಂದೆ ನಾಗರಾಜಯ್ಯ ಹೇಳಿದ್ದಾರೆ.
 
ಚೆನ್ನೈನಲ್ಲಿ ಭೃಷ್ಟಾಚಾರ ನಿಗ್ರಹ ದಳದ ಸಹಾಯಕ ಎಸ್‌ಪಿಯಾಗಿದ್ದ ಕೋಲಾರ ಜಿಲ್ಲೆಯ ಹರೀಶ್ 2009ನೇ ಐಪಿಎಸ್ ಬ್ಯಾಚ್‍ನ ತಮಿಳುನಾಡು ಕೇಡರ್ ಅಧಿಕಾರಿಯಾಗಿದ್ದರು. ಆದರೆ ಗುರುವಾರ ಚೆನ್ನೈನ ಐಪಿಎಸ್ ಅಧಿಕಾರಿಗಳ ಮೆಸ್‍ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. 

ವೆಬ್ದುನಿಯಾವನ್ನು ಓದಿ