ದ್ವೇಷದ ಹೇಳಿಕೆಗಾಗಿ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ: ಸಚಿವ ಮಂಜು

ಶನಿವಾರ, 9 ಜುಲೈ 2016 (18:31 IST)
ಆತ್ಮಹತ್ಯೆಗೂ ಮುನ್ನ ದ್ವೇಷಕ್ಕಾಗಿ ನೀಡಿದ ಹೇಳಿಕೆಯಿಂದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿಯುವುದು ಎಷ್ಟು ಸರಿ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.
 
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು, ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಸಾಯುವ ಮgನ್ನ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕಿಲ್ಲ ಎಂದು ಹೇಳಿದರು.
 
ಆತ್ಮಹತ್ಯೆಗೆ ಶರಣಾಗುವುದು ಒಂದು ಅಪರಾಧ, ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಶರಣಾಗುವ ಬದಲು, ಬದುಕಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕಿತ್ತು. ಅವರು ಬದುಕಿದ್ದಾಗಲೇ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಿತ್ತು. ಆದರೆ, ಅವರು ಆತ್ಮಹತ್ಯೆಗೂ ಮುಂಚೆ ದ್ವೇಷದಿಂದ ನೀಡಿರುವ ಹೇಳಿಕೆಯಿಂದ ಸಚಿವರು ರಾಜೀನಾಮೆ ನೀಡುವುದು ಎಷ್ಟು ಸರಿ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ..

ವೆಬ್ದುನಿಯಾವನ್ನು ಓದಿ