ವಿಬ್‌ಗಯಾರ್ ಬಾಲಕಿ ಮೇಲೆ ನಡೆದಿದ್ದು ಗ್ಯಾಂಗ್‌ರೇಪ್, ಇಬ್ಬರ ಬಂಧನ

ಮಂಗಳವಾರ, 29 ಜುಲೈ 2014 (15:59 IST)
ವಿಭ್‌ಗಯಾರ್ ಶಾಲೆಯಲ್ಲಿ ಕಳೆದ ವಾರ 6 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಇನ್ನೂ ಇಬ್ಬರು ಜಿಮ್ ಬೋಧಕರನ್ನು ಬಂಧಿಸಿದ್ದು, ಬಾಲಕಿ ಮೇಲೆ ಗ್ಯಾಂಗ್‌ರೇಪ್ ನಡೆದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. 
 
ವಿಬ್‌ಗಯಾರ್ ಪ್ರಕರಣದಲ್ಲಿ ಇನ್ನೂ ಇಬ್ಬರ ಬಂಧನದಿಂದ ರೇಪ್ ದೂರು ಈಗ ಗ್ಯಾಂಗ್ ರೇಪ್‌ಗೆ ಪರಿವರ್ತನೆಯಾಗಿದೆ. ಕಳೆದ ವಾರ ಬಂಧಿಸಲಾಗಿದ್ದ ಸ್ಕೇಟಿಂಗ್ ಭೋದಕ ಮುನ್ನಾ ಪಾತ್ರದ ಬಗ್ಗೆ ಖಚಿತಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದು, ಅವನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳಿದ್ದು, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅವನ್ನು ಬಂಧಿಸಲಾಗಿತ್ತೆಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಗೆ ಕಾರಣವಾದ ಇಬ್ಬರು ಜಿಮ್ ಬೋಧಕರನ್ನು ನಾವು ಬಂಧಿಸಿದ್ದೇವೆ ಎಂದು ಆಯುಕ್ತರು ಹೇಳಿದರು. ಲಾಲ್ ಗಿರಿ ಮತ್ತು ವಾಸಿಂ ಪಾಶಾ ವಿರುದ್ಧ ಕಠಿಣ ಕಾನೂನಿನ ಅನ್ವಯ ಕೇಸು ದಾಖಲಿಸಲಾಗಿದ್ದು, ಈ ಘಟನೆಯ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಬೆಂಗಳೂರು ಪೊಲೀಸರ ಮೇಲೆ ತಮಗೆ ನಂಬಿಕೆಯಿಲ್ಲ ಎಂದೂ ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ