ಸಾಧುಗಳ ಗಾಂಜಾ ಸೇವನೆ: ಮೂಕಪ್ರೇಕ್ಷಕರಾದ ಪೊಲೀಸರು

ಸೋಮವಾರ, 1 ಫೆಬ್ರವರಿ 2016 (14:22 IST)
ರಾಯಚೂರು ಜಿಲ್ಲೆ ಸಿಂಧನೂರು ಬಳಿ ಪ್ರತಿವರ್ಷವೂ ಅಂಬಾಮಠದ ಜಾತ್ರೆ ನಡೆಯುತ್ತೆ.  ಈ ಸಲದ ಜಾತ್ರೆಯಲ್ಲಿ ಉತ್ತರ ಭಾರತದಿಂದ ಅನೇಕ ಸಾಧು, ಸಂತರು ಆಗಮಿಸಿದ್ದು, ಇಲ್ಲಿ ಬೀದಿಯಲ್ಲೇ ಕುಳಿತು ಸಾಧುಗಳು ಪೊಲೀಸರ ಎದುರೇ ಗಾಂಜಾ ಸೇದುತ್ತಾರೆ.

ಜಾತ್ರೆಯಲ್ಲಿ ಬರುವ ಅನೇಕ ಭಕ್ತರಿಗೆ ಸಾಧುಗಳು ಗಾಂಜಾ ಮಾರಾಟ ಮಾಡ್ತಾರೆ. ಆದರೆ ಸಾಧು, ಸಂತರು ಧಂ ಮಾರೋ ಧಂ ಮಾಡುತ್ತಿದ್ದರೂ  ಪೊಲೀಸರು ಮೂರಪ್ರೇಕ್ಷಕರಂತೆ ನೋಡಿಕೊಂಡು ಸುಮ್ಮನಿರುವುದು ಅಲ್ಲಿನ ನಿವಾಸಿಗಳಿಗೆ ಮುಜುಗರಕ್ಕೀಡುಮಾಡಿದೆ.

ಗಾಂಜಾಸೇವನೆಗೆ ಮತ್ತು ಮಾರಾಟಕ್ಕೆ ನಿಷೇಧವಿದ್ದರೂ ಗಾಂಜಾ ಸೇದುವಿಕೆ ಮತ್ತು ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸರು ಮೌನಪ್ರೇಕ್ಷಕರಾಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ