ಗ್ಯಾಸ್ ಟ್ಯಾಂಕರ್‌ ಸ್ಫೋಟ: 10 ಮಂದಿಗೆ ಗಾಯ

ಮಂಗಳವಾರ, 1 ಸೆಪ್ಟಂಬರ್ 2015 (11:44 IST)
ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ವೊಂದು ಸ್ಫೋಟಗೊಂಡ ಪರಿಣಾಮ 7-8 ಮನೆಗಳು ಹಾನಿಗೀಡಾಗಿದ್ದು, ಮನೆಯಲ್ಲಿದ್ದ 10 ಮಂದಿ ನಿವಾಸಿಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಇಂದು ಬೆಳಗ್ಗೆ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.  
 
ಹೌದು, ಈ ಘಟನೆಯು ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಈ ಘಟನೆ ಸಂಭವಿಸಿದ್ದು, ಇಂದು ಬೆಳಗ್ಗೆ 05.30-06.00 ಗಂಟೆ ವೇಳೆಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ನಡೆದಿದೆ. ಘಟನೆಯಲ್ಲಿ 8 ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದು, ಈ ಪರಿಣಾಮ ಮನೆಯಲ್ಲಿದ್ದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮನೆಗಳಷ್ಟೇ ಅಲ್ಲದೆ ಅಡಿಕೆ ಮತ್ತು ತೆಂಗಿನ ಮರಗಳೂ ಕೂಡ ಹಾನಿಗೊಳಗಾಗಿದ್ದು, ಸುಟ್ಟು ಕರಕಲಾಗಿವೆ. ಜೊತೆಗೆ ವಿದ್ಯುತ್ ಕೂಡ ಕಡಿತಗೊಂಡಿದೆ. 
 
ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕರ ಹಿತರಪಕ್ಷಣೆ ದೃಷ್ಟಿಯಿಂದ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದೆ. 
 
ಇನ್ನು ಘಟನೆಯನ್ನು ಶಮನಗೊಳಿಸುವ ಸಲುವಾಗಿ ಮಂಗಳೂರಿನಿಂದ ತಜ್ಞ ಎಂಜಿನಿಯರ್‌ಗಳ ತಂಡವನ್ನು ಕರೆಸಲಾಗುತ್ತಿದ್ದು, ಶೀಘ್ರವೇ ಕ್ರಮಕೊಗಳ್ಳಲಿದ್ದೇವೆ ಎಂದು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧಿಕಾರಿ ಆರ್.ದೇವರಾಜ್ ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ