ಐಟಿ ಕಂಪನಿಯಲ್ಲಿ ದೆವ್ವಗಳ ಕಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಶನಿವಾರ, 20 ಸೆಪ್ಟಂಬರ್ 2014 (10:37 IST)
ಬೆಂಗಳೂರಿನ ಪ್ರಸಿದ್ಧ ಐಟಿ ಕಂಪನಿಯಲ್ಲಿ ದೆವ್ವ ಓಡಾಡುತ್ತಿದೆಯಂತೆ. ಕಚೇರಿಯಲ್ಲಿರೋ ವಸ್ತುಗಳೇ ದೆವ್ವಕ್ಕೆ ಆಟಿಕೆಯಾಗಿದೆಯಂತೆ. ಇದು ಐಟಿ ಕಂಪನಿಯಲ್ಲಿ ನಡೆಯುತ್ತಿರುವ ವಿದ್ಯಮಾನವಾಗಿದ್ದು, ಕುರ್ಚಿ ತನ್ನಿಂದ ತಾನೇ ಚಲಿಸುತ್ತದೆ. ಕಂಪ್ಯೂಟರ್‌ಗಳು ತಂತಾನೇ ಆನ್ ಆಗುತ್ತವೆ. ಸಿಬ್ಬಂದಿಗಳೆಲ್ಲಾ ಮನೆಗೆ ಹೋದ ಮೇಲೆ ಈ ದೆವ್ವದ ಆಟ ಶುರುವಾಗುತ್ತದೆ. ಬಾಗಿಲು ತನ್ನಿಂದ ತಾನೇ ದಿಢೀರನೇ ಮುಚ್ಚಿಕೊಳ್ಳುತ್ತದೆ.

ಕಚೇರಿಯಲ್ಲಿರೋ ವಸ್ತುಗಳು ದೆವ್ವಕ್ಕೆ ಆಟಿಕೆಯಾಗಿದೆ. ಪೇಪರ್‌ಗಳು ಲಾಕರ್‌ನಿಂದ ಓಪನ್ ಆಗಿ ಚೆಲ್ಲಾಪಿಲ್ಲಿಯಾಗಿ ಹೊರಗೆ ಬೀಳುತ್ತವೆ.

ಇದರ ಹಿಂದಿನ ಮರ್ಮವೇನು ಎನ್ನುವುದು ಮಾತ್ರ ಗೊತ್ತಾಗಿಲ್ಲ.  ಈ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ 2 ವರ್ಷಗಳ ನಂತರ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ.  ನಕಲಿ ವಿಡಿಯೋ ಸೃಷ್ಟಿ ಮಾಡಿದ್ದಾರೆಯೇ ಅಥವಾ ನಿಜವಾಗಲೂ ಇದು ದೆವ್ವಗಳ ಕಾಟವೇ ಎನ್ನುವುದು ಮಾತ್ರ ದೇವರಿಗೇ ಗೊತ್ತು. 

ವೆಬ್ದುನಿಯಾವನ್ನು ಓದಿ