ದೇವರು ಡಾ.ರಾಜ್ ಎಂಬ ಮಳೆಯ ಹನಿ ಸೃಷ್ಟಿಸಿದ: ರಜನಿಕಾಂತ್‌‍ರಿಂದ ನೆನಪುಗಳ ಸ್ಮರಣೆ

ಶನಿವಾರ, 29 ನವೆಂಬರ್ 2014 (11:49 IST)
ರಾಜ್ ಸ್ಮಾರಕ ಲೋಕಾರ್ಪಣೆ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ರಾಜ್ ಚಿತ್ರ ಸಂಪುಟವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದರು.  ನಟ ಚಿರಂಜೀವಿ ಡಾ. ರಾಜ್‌ಕುಮಾರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು.

ಇದಾದ ಬಳಿಕ ಖ್ಯಾತ ನಟಿ ಸರೋಜಾದೇವಿ  ರಾಜ್‌ಕುಮಾರ್ ಅವರ ಗುಣಗಾನ ಮಾಡಿದರು.  ಡಾ.ರಾಜ್ ಒಡನಾಟದ ಬಗ್ಗೆ ಖ್ಯಾತ ನಟ ರಜನಿಕಾಂತ್ ಕೆಲವು ಮಾತುಗಳನ್ನು ಆಡಿ  ಅವರ ಜೊತೆ ಒಡನಾಟದ ಕೆಲವು ಹಳೆಯ ನೆನಪುಗಳನ್ನು ಸ್ಮರಿಸಿದರು.  1927ರಲ್ಲಿ ದೇವರು ಡಾ. ರಾಜ್ ಎಂಬ ಮಳೆಯ ಹನಿ  ಸೃಷ್ಟಿಸಿದ. ಯಾವ ನಾಡು ಮಳೆಯ ಹನಿ ಬೀಳುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾಗ ಆ ಹನಿ ಕನ್ನಡನಾಡಿನಲ್ಲಿ ಬಿದ್ದಿತು.

ಆ ಹನಿ ವಿಶ್ವರೂಪ ತಾಳಿ 1956ರಲ್ಲಿ ನಾಗಾಲೋಟ ಆರಂಭಿಸಿತು. ಅಲ್ಲಿಂದ ಷುರುವಾದ ಆ ಪಯಣ 2008ರಲ್ಲಿ ಮುಗಿಯಿತು. ಸರಿಯಾಗಿ 54 ವರ್ಷದ ಪಯಣ. ಬೇಡರ ಕಣ್ಣಪ್ಪ, ಸಂತ ತುಕಾರಾಂ, ಅಮರಶಿಲ್ಪಿ ಜಕಣಾಚಾರಿ ಹೀಗೆ ಅನೇಕ ಚಿತ್ರಗಳಲ್ಲಿ ಡಾ. ರಾಜ್ ವಿಜೃಂಭಿಸಿದರು.

ರಾಜ್ ಅಂತ್ಯಕಾಲದಲ್ಲಿ ನಾನು ಬಹಳಷ್ಟು ದಿವಸ ಅವರ ಜೊತೆ ಕಾಲಕಳೆದೆ. ನನ್ನ ಜೀವನದ ಒಂದೊಂದು ಅಂಗದಲ್ಲೂ ಅವರ ಒಡನಾಟದ ನೆನಪುಗಳು ಕಾಡುತ್ತಿದೆ ಎಂದು ರಜನಿಕಾಂತ್ ರಾಜ್ ಅವರನ್ನು ಸ್ಮರಿಸಿದರು. 
 

ವೆಬ್ದುನಿಯಾವನ್ನು ಓದಿ