ಹುಂಡಿ ಹಣ ದೇವರಿಗೆ, ಆರತಿ ತಟ್ಟೆಯ ಹಣ ಅರ್ಚಕರಿಗೆ

ಗುರುವಾರ, 30 ಜುಲೈ 2015 (16:43 IST)
ಸರ್ಕಾರವು ಅರ್ಚಕರ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅದು ಅವರ ಘನತೆಗೆ ಧಕ್ಕೆ ಬರುವಂತಿದ್ದು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಅರ್ಚಕ ಮತ್ತು ಆಗಮಿಕರ ಸಂಘದ ಅಧ್ಯಕ್ಷ ಡಾ.ಎಸ್.ಆರ್.ಶೇಷಾದ್ರಿ ಭಟ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಕಳೆದ 2014ರ ಕೊನೆಯ ತಿಂಗಳಿಂದಲೂ ಕೂಡ ಇಂತಹ ವಿವಾದಾತ್ಮಕ ಸುತ್ತೋಲೆಗಳನ್ನೇ ಹೊರಡಿಸುತ್ತಿದೆ. ಇತ್ತೀಚೆಗೆ ಅರ್ಚರ ಬಗ್ಗೆಯೂ ಸುತ್ತೋಲೆಯನ್ನು ಹೊರಡಿಸಿದ್ದು, ಈಗಾಗಲೇ ಎಲ್ಲಾ ದೇವಾಲಯಗಳನ್ನು ಅದನ್ನು ಹಾಕಲಾಗಿದೆ. ಆದರೆ ಅದನ್ನು ಸಾರ್ವಜನಿಕರು ಓದಿದಲ್ಲಿ ಅರ್ಚಕರ ಬಗ್ಗೆ ಅನುಮಾನ ಉಂಟಾಗುತ್ತದೆ. ಆ ರೀತಿಯಲ್ಲಿರುವುದರಿಂದ ಅದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅರ್ಚಕರು, ಆಗಮಿಕರು ಹಾಗೂ ಉಪಾಂಧಿವಂತರೆಲ್ಲರೂ ಸೇರಿ ಸುತ್ತೋಲೆಯನ್ನು ಹಿಂಪಡೆಯುವವರೆಗೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. 
 
ಇನ್ನು ಸರ್ಕಾರದ ಮುಜರಾಯಿ ಇಲಾಖೆಯು ಹುಂಡಿ ಹಣ ದೇವರಿಗೆ, ತಟ್ಟೆಯ ಹಣ ಅರ್ಚಕರಿಗೆ ಎಂಬ ಫಲಕವನ್ನು ಸರ್ಕಾರದ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಅಳವಡಿಸುವಂತೆ ಸುತ್ತೋಲೆ ಹೊರಡಿಸಿತ್ತು. ಪರಿಣಾಮ ಈಗಾಗಲೇ ಈ ವಾಕ್ಯವುಳ್ಳ ಫಲಗಳನ್ನು ಹಲವು ದೇವಾಲಯಗಳಲ್ಲಿ ಅಳವಡಿಸಲಾಗಿದೆ. ಆದ್ದರಿಂದ ಅರ್ಚಕರು ಸರ್ಕಾರದ ಈ ಸುತ್ತೋಲೆಯ ವಿರುದ್ಧ ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ