ಬಿಲ್‌ನಲ್ಲಿ ಗೋಲ್ ಮಾಲ್: ಬೆಸ್ಕಾಂ ನೌಕರ ಅಮಾನತು

ಮಂಗಳವಾರ, 5 ಮೇ 2015 (10:41 IST)
ಗ್ರಾಹಕರಿಂದ ಹೆಚ್ಚು ಹಣ ಪಡೆದು ಕಡಿಮೆ ಮೊತ್ತದ ಹಣ ಜಮಾಗೊಳಿಸುವ ಜೊತೆಗೆ ಇಂಧನ ಇಲಾಖೆಗೆ ಸಮರ್ಪಕವಾಗಿ ಬಿಲ್ ಪಾವತಿಸಿಲ್ಲ ಎಂಬ ಕಾರಣದಿಂದ ಇಲ್ಲಿನ ಬೆಸ್ಕಾಂ ನೌಕರರೋರ್ವರನ್ನು ಹಿರಿಯ ಅಧಿಕಾರಿಗಳು ಇಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ. 
 
ಅಮಾನತಿಗೊಳಗಾದ ನೌಕರನನ್ನು ರವೀಂದ್ರಬಾಬು ಎನ್ನಲಾಗಿದ್ದು, ಇವರು ನಗರದ ಗಾಂಧಿನಗರದಲ್ಲಿರುವ ಬೆಸ್ಕಾಂನ ಉಪ ಕಚೇರಿಯ ಕ್ಯಾಶ್ ಕೌಂಟರ್ ನೌಕರರಾಗಿರುವ ಇವರು ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.  
 
ಆರೋಪವೇನು?
ಈತ ಗ್ರಾಹಕರಿಂದ ವಿದ್ಯತ್ ಬಿಲ್‌ನ್ನು ಪಡೆಯಲು ಗ್ರಾಮಗಳಿಗೆ ತೆರಳುತ್ತಿದ್ದ. ಈ ವೇಳೆ ಗ್ರಾಹಕರು 2000 ಬಿಲ್ ಪಾವತಿಸಬೇಕಾಗಿದ್ದಲ್ಲಿ ಅಷ್ಟನ್ನೂ ಕೂಡ ಪಡೆದು ಬಿಲ್‌ನಲ್ಲಿ ಮಾತ್ರ 1000 ಎಂದು ಮಾತ್ರವೇ ನಮೂದಿಸುತ್ತಿದ್ದ. ಅಲ್ಲದೆ ಗ್ರಾಹಕರು ಪಾವತಿಸಿದ ಹಣವನ್ನು ಬೆಸ್ಕಾಂ ಇಲಾಖೆಗೂ ಕೂಡ ಸರಿಯಾಗಿ ಲೆಕ್ಕ ನೀಡುತ್ತಿರಲಿಲ್ಲ. ಈ ಮೂಲಕ ಕಳೆದ ಹಲವು ತಿಂಗಳುಗಳಿಂದ ಸರ್ಕಾರಕ್ಕೆ ವಂಚಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರಿಯಿಂದ ಅಮಾನತುಗೊಳಿಸಲಾಗಿದೆ. 
 
ಇನ್ನು ಇಲಾಖೆಯ ಲೆಕ್ಕಪರಿಶೋಧನಾ ಅಧಿಕಾರಿಗಳಿಂದ ಹಣ ದುರ್ಬಳಕೆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.  

ವೆಬ್ದುನಿಯಾವನ್ನು ಓದಿ