ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಚಾಟಿ: ಮೂವರ ವಿರುದ್ಧ ಕ್ರಮ

ಬುಧವಾರ, 7 ಅಕ್ಟೋಬರ್ 2015 (19:20 IST)
ಭ್ರಷ್ಚಾಚಾರದ ವಿರುದ್ಧ ಚಾಟಿ  ಬೀಸುತ್ತಿರುವುದನ್ನು ಸರ್ಕಾರ ತಾನು ಕೈಗೊಂಡಿರುವ ಕೆಲವು ಕ್ರಮಗಳ ಮೂಲಕ ಸಾಬೀತು ಮಾಡಿದೆ.  ರಾಜ್ಯಸಚಿವ ಸಂಪುಟ ಸಭೆಯಲ್ಲಿ ಲಂಚ ಸ್ವೀಕರಿಸಿದ ಮೂವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ಕಾನೂನು ಸಚಿವ ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಆದರೆ ಸರ್ಕಾರ ಸಣ್ಣ ಸಣ್ಣ ಮೀನುಗಳಿಗೆ ಮಾತ್ರ ಗಾಳ ಹಾಕುತ್ತಿದ್ದ ಲಂಚ ಸ್ವೀಕರಿಸುವ ದೊಡ್ಡ, ದೊಡ್ಡ ತಿಮಿಂಗಲಗಳನ್ನು ಹಿಡಿಯುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
 
ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭವಾನಿ ಶಂಕರ್ ಪುತ್ರನ್ ವಿರುದ್ಧ ಲೋಕಾಯುಕ್ತ ತನಿಖೆಯಲ್ಲಿ 100 ರೂ. ಲಂಚ ಸ್ವೀಕರಿಸಿದ್ದು ಸಾಬೀತಾಗಿರುವುದರಿಂದ ಕಡ್ಡಾಯ ನಿವೃತ್ತಿ ಮಾಡಲಾಗಿದೆ. ಬೀದರ್‌ನ ಔರಾದ್ ತಾಲೂಕಿನಲ್ಲಿ ಬಸವರಾಜ್ ಪಾಳ್ನೆ ಔರಾದ್ ಉಪನೋಂದಣಾಧಿಕಾರಿ 2011ರಲ್ಲಿ ದೃಢೀಕರಣ ಪತ್ರ ನೀಡುವಾಗ ಪ್ರತಿಯೊಬ್ಬರಿಂದ 200 ರೂ. ಲಂಚ ಸ್ವೀಕರಿಸುತ್ತಿದ್ದರಿಂದ ಕಡ್ಡಾಯ ನಿವೃತ್ತಿ ಕೈಗೊಂಡಿದೆ.
 
ನಾಲ್ಕು ಸಾವಿರ ಲಂಚ ಸ್ವೀಕರಿಸುತ್ತಿದ್ದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಿ. ದೇವರಾಜಪ್ಪ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿ 4000 ಸಾವಿರ ಲಂಚ ಸ್ವೀಕರಿಸಿದ್ದು ಸಾಬೀತಾಗಿದ್ದರಿಂದ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಜಯಚಂದ್ರ ವಿವರಿಸಿದರು. 

ವೆಬ್ದುನಿಯಾವನ್ನು ಓದಿ