ವಿಪಕ್ಷಗಳ ಗದ್ದಲದ ನಡುವೆಯೇ 2 ವಿಧೇಯಕಗಳನ್ನು ಅನುಮೋದಿಸಿದ ಸರ್ಕಾರ

ಶನಿವಾರ, 20 ಡಿಸೆಂಬರ್ 2014 (13:19 IST)
ಇಂದು ಇಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೇ ಸರ್ಕಾರ ಎರಡು ವಿಧೇಯಕಗಳನ್ನು ಅಂಗೀಕರಿಸಿತು. 
 
ಅಂಗೀಕಾರಗೊಂಡ ವಿಧೇಯಕಗಳನ್ನು ಕರ್ನಾಟಕ ಸರೋವರ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2104 ಹಾಗೂ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಸಂಸ್ಥೆಗಳ ವಿಧೇಯಕ-2014ಗಳನ್ನು ಸರ್ಕಾರ ಅಂಗೀಕರಿಸಿತು. 
 
ಬಿಜೆಪಿ ಸದಸ್ಯರು ಸಚಿವ ಸಂಪುಟದಲ್ಲಿರುವ ಕಳಂಕಿತ ಸಚಿವರ ಬಗ್ಗೆ ಚರ್ಚಿಸಲು ಅವಕಾಱ ನೀಡಬೇಕೆಂದು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದರೆ, ಜೆಡಿಎಸ್ ಶಾಸಕರು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಗಿತ್ತು. ಇದರ ನಡುವೆಯೇ ಸರ್ಕಾರ ಈ ಎರಡು ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಿತು. 
 
ಜೊತೆಗೆ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ವಿಧೇಯಕ-2010 ಹಾಗೂ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ವಿಧೇಯಕ-2012ನ್ನು ಸರ್ಕಾರ ಹಿಂಪಡೆಯಿತು. 

ವೆಬ್ದುನಿಯಾವನ್ನು ಓದಿ